FIH Hockey ಪುರುಷರ ಪ್ರೊ ಹಾಕಿ ಲೀಗ್ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ದ 7-4 ಗೋಲುಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.
ಕಳೆದ ಅಕ್ಟೋಬರ್ 28ರಂದು ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 4-3 ಗೋಲುಗಳಿಂದ ಗೆದ್ದಿತ್ತು. ಪಂದ್ಯ ಆರಂಭದ 15 ನಿಮಿಷದಲ್ಲಿ ಭಾರತ ಹಿನ್ನಡೆ ಅನುಭವಿಸಿತು. ಮೊದಲ ಕ್ವಾರ್ಟರ್ನಲ್ಲಿ ಮೂರು ಗೋಲುಗಳನ್ನು ಬಿಟ್ಟುಕೊಟ್ಟಿತ್ತು. ನಂತರ ಮುಂದಿನ ಮೂರು ಕ್ವಾರ್ಟರ್ಗಳಲ್ಲಿ ತಲಾ ಎರಡೆರಡು ಗೋಲುಗಳನ್ನು ಹೊಡೆದು ಗೆಲುವು ಪಡೆಯಿತು.
ನಾಯಕ ಹರ್ಮನ್ ಪ್ರೀತ್ ಸಿಂಗ್ (7ಮತ್ತು 9ನೇ ನಿಮಿಷ) ಕಾರ್ತಿ ಸೇಲ್ವಂ (17 ಮತ್ತು 38ನೇ ನಿಮಿ), ರಾಜ್ ಕುಮಾರ್ ಪಾಲ್ (31ನೇ ನಿಮಿ), ಸುಖ್ಜೀತ್ ಸಿಂಗ್(50ನೇ ನಿಮಿ), ಜುಗುರಾಜ್ ಸಿಂಗ್ (53ನೇ ನಿಮಿಷ), ಭಾರತದ ಪರ ಗೋಲುಗಳನ್ನು ಹೊಡೆದರು.
ನ್ಯೂಜಿಲೆಂಡ್ ಪರ ಸಿಮನ್ ಚೈಲ್ಡ್ (2ನೇ ನಿಮಿ),ಸಾಮ್ ಲಾನೆ (9ನೇ ನಿಮಿಷ), ಸ್ಮಿತ್ ಜಾಕ್ (14ನೇ ನಿಮಿಷ), ನಿಕ್ ವುಡ್ಸ್(54ನೇ ನಿಮಿಷ) ಕಿವೀಸ್ ಪರ ಗೋಲುಗಳನ್ನು ಹೊಡೆದರು. ಭಾರತ ಒಟ್ಟು 11 ಪೆನಾಲ್ಟಿ ಕಾರ್ನರ್ಗಳ ಅವಕಾಶ ಪಡೆದು 3ರನ್ನು ಗೋಲುಗಳನ್ನಾಗಿ ಪರಿವರ್ತಿಸಿತು.