ಬಲಿಷ್ಠ ಇಂಗ್ಲೆಂಡ್ ಫುಟ್ಬಾಲ್ ತಂಡ ಇರಾನ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿತು.
ಸೋಮವಾರ ಇಲ್ಲಿನ ಖಲೀಫ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಇರಾನ್ ತಂಡವನ್ನು 6-2 ಗೋಲುಗಳಿಂದ ಮಣಿಸಿತು. ಇಂಗ್ಲೆಂಡ್ ಜೆ.ಬೆಲ್ಲಿಂಗ್‍ಹ್ಯಾಮ್(35ನೇ ನಿಮಿಷ), ಬಿ.ಸಾಕಾ (43ನೇ ನಿಮಿಷ), ಆರ್.ಸ್ಟಿರ್ಲಿಂಗ್ (45ಪ್ಲಸ್ 1)ಬಿ. ಸಾಕಾ (62ನೇ ನಿಮಿಷ), ಎಂ. ರಾಶ್ ಫೋರ್ಡ್(71ನೇ ನಿಮಿಷ), ಜೆ. ಗ್ರಿಯಾಲಿಶ್ (89ನೇ ನಿಮಿಷ).
ಇರಾನ್ ತಂಡದ ಪರ ಎಂ,ಟಾರೆಮಿ (65ನೇ ನಿಮಿಷ),(90ಪ್ಲಸ್ 13ನೇ ನಿಮಿಷ) ಗೋಲು ಹೊಡೆದರು.

ಪಂದ್ಯ ಆರಂಭದ ನಾಲ್ಕನೆ ನಿಮಿಷದಲ್ಲಿ ಇಂಗ್ಲೆಂಡ್ ಗೋಲು ಹೊಡೆಯುವ ಅವಕಾಶದಿಂದ ವಂಚಿತವಾಯಿತು. ಮೊದಲ ಅವಯಲ್ಲಿ ಇಂಗ್ಲೆಂಡ್ 3-0 ಗೋಲುಗಳಿಂದ ಪ್ರಭುತ್ವ ಸಾಧಿಸಿತು. ಎರಡನೆ ಅವಯಲ್ಲಿ ಕಾರ್ನರ್ ಕಿಕ್ ಅವಕಾಶ ಪಡೆದ ಇಂಗ್ಲೆಂಡ್ ಸ್ಟ್ರೈಕರ್ ಸಾಕಾ ಎರಡನೆ ಗೋಲು ಹೊಡೆದರು. 65ನೇ ನಿಮಿಷದಲ್ಲಿ ಇರಾನ್ ತಂಡದ ತಾರೆಮಿ ಮೊದಲ ಗೋಲು ಹೊಡೆದರು. ಪಂದ್ಯ ಕೊನೆಯಲ್ಲಿ ಮತ್ತೊಂದು ಗೋಲು ಹೊಡೆದರು.
ಪಂದ್ಯಕ್ಕೂ ಮುನ್ನ ಇರಾನ್ ತಂಡದ ಆಟಗಾರರು ತಮ್ಮ ರಾಷ್ಟ್ರಗೀತೆಯನ್ನು ಹಾಡಲಿಲ್ಲಘಿ. ಕಾರಣ ತವರಿನಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಾಡಿಲ್ಲ ಎಂದು ತಿಳಿದು ಬಂದಿದೆ.