Fenesta Open: ವೈಷ್ಣವಿ, ವಿಷ್ಣು ವರ್ಧನ್ ಸೆಮಿಫೈನಲ್ ಗೆ
ಶುಕ್ರವಾರ ನವದೆಹಲಿಯಲ್ಲಿ ನಡೆದ ಫೆನೆಸ್ಟಾ ಓಪನ್ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ವೈಷ್ಣವಿ ಅಡ್ಕರ್ ಅವರು ಮೂರನೇ ಶ್ರೇಯಾಂಕದ ಯುಬ್ರಾಣಿ ಬ್ಯಾನರ್ಜಿ ಅವರನ್ನು 6-4 6-0 ಅಂತರದಿಂದ ಸೋಲಿಸಿದರು.
ಪುರುಷರ ಸಿಂಗಲ್ಸ್‌ನಲ್ಲಿ ವಿಷ್ಣು ವರ್ಧನ್ ಅವರು ಸಿದ್ಧಾರ್ಥ್ ವಿಶ್ವಕರ್ಮ ಅವರನ್ನು 7-6 (7/4) 4-6 7-6 (8/6) ರೋಚಕ ಮುಖಾಮುಖಿಯಲ್ಲಿ ಸೋಲಿಸಿ ಕೊನೆಯ ನಾಲ್ಕರಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡರು.
ಈ ವರ್ಷದ ಆಗಸ್ಟ್‌ನಲ್ಲಿ ನಡೆದ 18 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದಿದ್ದ ವೈಷ್ಣವಿ, ಹಿರಿಯರ ಮಟ್ಟದಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಅಗ್ರ ಶ್ರೇಯಾಂಕದ ವೈದೇಹಿ ಚೌಧರಿ 6-1, 6-2 ಅಂತರದಲ್ಲಿ ಫರ್ಹತ್ ಅಲೀನ್ ಕಮರ್ ವಿರುದ್ಧ ಜಯಗಳಿಸುವ ಮೂಲಕ ತಮ್ಮ ಅದ್ಭುತ ಓಟವನ್ನು ಮುಂದುವರೆಸಿದರು.
ಎರಡನೇ ಶ್ರೇಯಾಂಕದ ಸಾಯಿ ಸಂಹಿತಾ ಕ್ವಾರ್ಟರ್ ಫೈನಲ್‌ನಲ್ಲಿ ಸಂದೀಪ್ತಿ ಸಿಂಗ್ ಅವರನ್ನು 6-3, 7-5 ರಿಂದ ಸೋಲಿಸಿದರೆ, ನಾಲ್ಕನೇ ಶ್ರೇಯಾಂಕದ ಆಕಾಂಕ್ಷಾ ನಿತುರೆ 6-1, 6-3 ರಲ್ಲಿ ಸಾಹಿರಾ ಸಿಂಗ್ ಅವರನ್ನು ಸೋಲಿಸಿದರು.
ಪುರುಷರ ವಿಭಾಗದಲ್ಲಿ ಚಿರಾಗ್ ದುಹಾನ್ ಅವರು ನಿತಿನ್ ಸಿನ್ಹಾ ವಿರುದ್ಧ ಕ್ವಾರ್ಟರ್ ಫೈನಲ್ ನಲ್ಲಿ ಜಯಗಳಿಸಲು ತೀವ್ರ ಹೋರಾಟ ನಡೆಸಬೇಕಾಯಿತು. ಅವರು 7-5, 3-6, 6-1 ರಲ್ಲಿ ಪಂದ್ಯವನ್ನು ಗೆದ್ದರು.
Fenesta Open, National Tennis, Championship, Vaishnavi, Vishnu Vardhan