ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಪರ್ತ್ ಮೈದಾನದಲ್ಲಿ ಶ್ರೀಲಂಕಾ ಬೊಂಬಾಟ್ ಬ್ಯಾಟಿಂಗ್ ಮಾಡಿದ ಸ್ಟೋಯ್ನಿಸ್ ಕೇವಲ 17 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಟಿ20 ವಿಶ್ವಕಪ್ ಇತಿಹಾಸದಲ್ಲಿ ವೇಗದ 2ನೇ ಅರ್ಧ ಶತಕವಾಗಿದೆ.
ಲಂಕಾ ಬೌಲರ್ಗಳನ್ನು ಬೆಂಡೆತ್ತಿದ ಆಸಿಸ್ ಆಲ್ರೌಂಡರ್, 18 ಎಸೆತದಲ್ಲಿ 4 ಬೌಂಡರಿ 6 ಸಿಕ್ಸರ್ ಸಿಡಿಸಿ ಒಟ್ಟು 58 ರನ್ ಕಲೆ ಹಾಕಿದರು. 17 ಎಸೆತದಲ್ಲಿ ವೇಗದ ಅರ್ಧ ಶತಕ ಸಿಡಿಸಿದ ತಂಡದ ಮೊದಲ ಬ್ಯಾಟರ್ ಎಂಬ ಗೌರವಕ್ಕೆ ಪಾತ್ರರಾದರು.
ಭರ್ಜರಿ ಬ್ಯಾಟಿಂಗ್ಗೆ ಐಪಿಎಲ್ ಕಾರಣವೆಂದು ಮಾರ್ಕಸ್ ಸ್ಟೋಯ್ನಿಸ್ ಹೇಳಿದ್ದಾರೆ. ಕೆಲವು ವರ್ಷಗಳಿಂದ ಐಪಿಎಲ್ ಆಡುತ್ತಾ ಬಂದಿದ್ದು ಬೇರೆ ತಂಡಗಳಲ್ಲಿ ಆಡಿದ ಅನುಭವ ಹೊಂದಿದ್ದೇನೆ.

ಸ್ಪಿನ್ ವಿರುದ್ಧ ಹೇಗೆ ಆಡಬೇಕೆನ್ನುವ ತಂತ್ರಗಾರಿಕೆ ಮತ್ತು ಮಾನಸಿಕ ಸಾಮರ್ಥ್ಯದ ಬಗ್ಗೆ ತಿಳಿದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
7 ವರ್ಷಗಳಿಂದ ಸ್ಟೋಯ್ನಿಸ್ ಐಪಿಎಲ್ ಆಡುತ್ತಾ ಬಂದಿದ್ದು 67 ಪಂದ್ಯಗಳಿಂದ 1 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.