Fake Feilding : ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಬಾಂಗ್ಲಾ ತಂಡದ ಬ್ಯಾಟರ್ ನೂರುಲ್ ಹಸನ್ ಫೇಕ್ ಫೀಲ್ಡಿಂಗ್ ಆರೋಪ ಮಾಡಿದ್ದಾರೆ. ಪೆನಾಲ್ಟಿ ರೂಪದಲ್ಲಿ ಐದು ಕೊಡಬೇಕಿತ್ತು ಎಂದು ಹೇಳಿದ್ದಾರೆ.
ಅಡಿಲೇಡ್ನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧದ ಸೂಪರ್ 12 ಪಂದ್ಯದಲ್ಲಿ ಭಾರತ ರೋಚಕ ಗೆಲುವು ದಾಖಲಿಸಿತು.
ರೋಹಿತ್ ಪಡೆ 184 ರನ್ ಗಳಿಸಿತು. ಬಹತ್ ಮೊತ್ತ ಬೆನ್ನತ್ತಿದ ಬಾಂಗ್ಲಾ ತಂಡ ಲಿಟನ್ ದಾಸ್ ಉತ್ತಮ ಆರಂಭ ನೀಡಿದರು. ಮಳೆ ಬಂದಿದ್ದರಿಂದ ಬಾಂಗ್ಲಾಗೆ 16 ಓವರ್ಗಳಲ್ಲಿ 151 ರನ್ ಗುರಿ ನೀಡಲಾಯಿತು.
7ನೇ ಓವರ್ನಲ್ಲಿ ಮೈದಾನ ಒದ್ದೆಯಾಗಿತ್ತು.ಡೀಪ್ ಮಿಡ್ ವಿಕೆಟ್ ಬಳಿ ಚೆಂಡು ಎಸೆದೆ ರೀತಿಯಲ್ಲಿ ವಿರಾಟ್ ಕೊಹ್ಲಿ ಸನ್ನೆ ಮಾಡಿದರು. ಇದನ್ನು ಬಾಂಗ್ಲಾ ಬ್ಯಾಟರ್ಗಳು ಮತ್ತು ಅಂಪೈಯರ್ಗಳು ಗಮನಿಸಲಿಲ್ಲ. ಇದಕ್ಕೆ 5 ರನ್ ಪೆನಾಲ್ಟಿ ಹಾಕಬೇಕಿತ್ತು. ದುರಾದೃಷ್ಟವಶತ್ ಯಾರು ಕ್ರಮಕೈಗೊಂಡಿಲ್ಲ ಎಂದು ನೂರುಲ್ ಹೇಳಿದ್ದಾರೆ.
ಐಸಿಸಿ ನಿಯಮ 41.5ರ ಪ್ರಕಾರ ಫಿಲ್ಡರ್ಗಳು ಅಡ್ಡಿಪಡಿಸಿದರೆ,ಬ್ಯಾಟರ್ಗಳ ಗಮನವನ್ನು ಬೇರೆಡೆಗೆ ಸೆಳೆಯುವಂತೆ ಮಾಡುವಂತಿಲ್ಲ.
ಒಂದು ವೇಳೆ ಕ್ರಮಕೈಗೊಂಡಿದ್ದರೆ ಬಾಂಗ್ಲಾದೇಶ ಗೆಲ್ಲುತ್ತಿತ್ತು ಅನ್ನೋದು ಕೆಲವರ ವಾದವಾಗಿದೆ.