IPL 2022- RCB – ಬರೆದಿಟ್ಟುಕೊಳ್ಳಿ.. ಈ ಸಲ ಕಪ್ ನಮ್ದೆ..- ಆರ್ ಸಿಬಿ ಹೊಸ ಕ್ಯಾಪ್ಟನ್ ಮಾತು..!

ಅಂತು ಇಂತೂ ಆರ್ ಸಿಬಿ ತಂಡಕ್ಕೆ ಬಲಿಷ್ಠ ಮತ್ತು ಅನುಭವಿ ಆಟಗಾರನಾಗಿ ಸಿಕ್ಕಿರುವುದು ಅಭಿಮಾನಿಗಳಿಗೆ ಫುಲ್ ಖುಷಿಯಾಗಿದೆ.
ಒಂದು ರೀತಿಯಲ್ಲಿ ಇದು ನಿರೀಕ್ಷಿತವಾಗಿತ್ತು. ಆದ್ರೂ ಆರ್ ಸಿಬಿ ಹೈಕಮಾಂಡ್ ತಂಡದ ನೂತನ ಆಯ್ಕೆ ವಿಚಾರವನ್ನು ತುಂಬಾನೇ ಗುಟ್ಟಾಗಿಟ್ಟುಕೊಂಡಿತ್ತು. ಇದೀಗ ಗುಟ್ಟು ರಟ್ಟಾಗಿದೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕ, ಸಿಎಸ್ ಕೆ ತಂಡದ ಮ್ಯಾಚ್ ವಿನ್ನರ್ ಫಾಪ್ ಡುಪ್ಲೇಸಸ್ ಅವರು ಆರ್ ಸಿಬಿ ತಂಡದ ಹೊಸ ಸಾರಥಿ.
ನಾಯಕನಾಗಿ ಆಯ್ಕೆಯಾಗುತ್ತಿದ್ದಂತೆ ಫಾಫ್ ಡುಪ್ಲೇಸಸ್ ಅವರು ಅಭಿಮಾನಿಗಳಿಗೆ ಭರವಸೆಯ ಮಾತುಗಳನ್ನು ಹೇಳಿದ್ದಾರೆ. ತಂಡದಲ್ಲಿ ಅನುಭವಿ ಹಾಗೂ ಯುವ ಆಟಗಾರರು ಇದ್ದಾರೆ. ಹೀಗಾಗಿ ತಂಡವನ್ನು ಮುನ್ನಡೆಸುವುದು ದೊಡ್ಡ ಕಷ್ಟವೇನೂ ಆಗಲ್ಲ. ಸವಾಲುಗಳನ್ನು ದಿಟ್ಟವಾಗಿ ಎದುರಿಸುವುದು ಹೇಗೆ ಎಂಬುದು ಚೆನ್ನಾಗಿ ಗೊತ್ತಿದೆ. ಅದನ್ನೆಲ್ಲಾ ಮೆಟ್ಟಿ ನಿಂತು ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆ. ಈ ಸಲ ಕಪ್ ನಮ್ದೆ ಅಂತ ಹೇಳಿದ್ದಾರೆ. Faf du Plessis unveiled as RCB’s captain for IPL 2022

ಆರ್ ಸಿಬಿಯ ಲಯನ್ ಫಾಫ್ ಡುಪ್ಲೇಸಸ್ ಮಾತು ಕೇಳಿ ಅಭಿಮಾನಿಗಳಿಗೂ ಖುಷಿಯಾಗಬಹುದು. ಆದ್ರೆ ಕಳೆದ 14 ವರ್ಷಗಳಿಂದ ಪ್ರತಿ ಸಲ ಕಪ್ ನಮ್ದೆ ಅಂತ ಹೇಳುತ್ತಾ ಬಂದಿರೋ ಅಭಿಮಾನಿಗಳಿಗೆ ಈ ಬಾರಿ ನಿರಾಸೆಗೊಳಿಸುವುದಿಲ್ಲ. ಯಾಕಂದ್ರೆ ಫಾಫ್ ಡುಪ್ಲೇಸಸ್ ಮ್ಯಾಚ್ ವಿನ್ನರ್ ಪ್ಲೇಯರ್. ಅದರಲ್ಲೂ ಬಿಗ್ ಮ್ಯಾಚ್ ಗಳಲ್ಲಿ ಯಾವ ರೀತಿ ಆಡಬೇಕು. ಯಾವ ರೀತಿ ಒತ್ತಡಗಳನ್ನು ಮೆಟ್ಟಿ ನಿಲ್ಲಬೇಕು ಎಂಬುದು ಕೂಡ ಅವರಿಗೆ ಗೊತ್ತಿದೆ. ಸಿಎಸ್ ಕೆ ತಂಡದ ಯಶಸ್ಸಿನಲ್ಲಿ ಫಾಫ್ ಡುಪ್ಲೇಸಸ್ ಪಾತ್ರ ಬಹಳಷ್ಟಿದೆ. ಹೀಗಾಗಿ ಡುಪ್ಪೇಸಸ್ ಅವರು ಅನುಭವ ಮತ್ತು ನಾಯಕತ್ವದ ಕಲೆ ಈ ಬಾರಿ ಆರ್ ಸಿಬಿಗೆ ವರದಾನವಾಗಬಹುದು.
ಒಟ್ಟಿನಲ್ಲಿ ಆರ್ ಸಿಬಿ ಹೊಸ ಜೆರ್ಸಿ, ಹೊಸ ನಾಯಕ.. ಹೊಸ ಗೆಟಪ್ ನೊಂದಿಗೆ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. ಆಲ್ ದಿ ಬೆಸ್ಟ್ ಫಾಫ್ ಡುಪ್ಲೇಸಸ್. ಈ ಸಲ ಕಪ್ ನಮ್ದೆ..!