ENGvsAFG ಇಂದಿನಿಂದ ಟಿ20 ವಿಶ್ವಕಪ್ನಲ್ಲಿ ಬಲಿಷ್ಠ ತಂಡಗಳ ಕಾದಾಟ ನಡೆಯಲಿದೆ. ಗುಂಪು 1 ರಲ್ಲಿ ಇಂದು ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಎರಡೂ ತಂಡಗಳ ಕದನ ಕುತೂಹಲ ಮೂಡಿಸಿದೆ.
ಆಫ್ಘಾನ್ ಎದುರು ಇಂಗ್ಲೆಂಡ್ ತಂಡ ಫೇವರಿಟ್ ಎನಿಸಿದೆ. ಅದರೆ ಗಾಯದ ಸಮಸ್ಯೆ ತಂಡವನ್ನು ಕಾಡುತ್ತಿದೆ. ಜಾನಿ ಭೈರ್ ಸ್ಟೊ, ಜೆಸನ್ ರಾಯ್ ಹಾಗೂ ರೀಸಿ ಟಾಪ್ಲೆ ಗಾಯಾಳುಗಳಾಗಿದ್ದಾರೆ. ಆಫ್ಘಾನ್ ತಂಡ ಟಿ20 ಫಾರ್ಮೆಟ್ನಲ್ಲಿ ಅಚ್ಚರಿ ಫಲಿತಾಂಶಗಳನ್ನು ನೀಡಿರುವುದರಿಂದ ಇಂದಿನ ಪಂದ್ಯದಲ್ಲಿ ಕಡೆಗಣಿಸುವಂತಿಲ್ಲ.
ಇಂದಿನ ಪಂದ್ಯದಲ್ಲಿ ಉಭಯ ತಂಡಗಳ ತಾರಾ ಆಟಗಾರರು ಮುಖಾಮುಖಿಯಾಗಲಿದ್ದು ಸವಾಲು ಹಾಕಲಿದ್ದಾರೆ.
ಜೋಸ್ ಬಟ್ಲರ್ ವರ್ಸಸ್ ಫಾಜಲ್ ಹಕ್ ಫಾರೂಖಿ
ಕಳೆದ ಐಪಿಎಲ್ನಲ್ಲಿ ಜೋಸ್ ಬಟ್ಲರ್ ಅಮೋಘ ಪ್ರದರ್ಶನ ನೀಡಿದ್ದರು. 17 ಇನ್ನಿಂಗ್ಸ್ ಗಳಿಂದ 863 ರನ್ ಗಳಿಸಿ 150 ಸ್ಟ್ರೈಕ್ ರೇಟ್ ಪಡೆದಿದ್ದರು. ಇವರಿಗೆ ಆಫ್ಘಾನ್ ತಂಡದ ಎಡಗೈ ವೇಗಿ ಫಾಜಲ್ ಫಾರೂಕಿ ಸವಾಲು ಹಾಕಲಿದ್ದಾರೆ.ಫಾಜಲ್ ಕಳೆದ 13 ಟಿ20 ಪಂದ್ಯಗಳಿಂದ 17 ವಿಕೆಟ್ ಪಡೆದಿದ್ದಾರೆ. ಜೋಸ್ ಬಟ್ಲರ್ ಅವರನ್ನು ಕಟ್ಟಿಹಾಕುವುದೇ ಆಫ್ಘಾನ್ಗೆ ದೊಡ್ಡ ಸವಾಲಾಗಿದೆ.
ಲೀವಿಂಗ್ ಸ್ಟೋನ್ ವರ್ಸಸ್ ರಶೀದ್ ಖಾನ್
ಲಿಯಾಮ್ ಲಿವೀಂಗ್ ಸ್ಟೋನ್ ವೇಗಿಗಳು ಸೇರಿದಂತೆ ಸ್ಪಿನ್ನರ್ಗಳನ್ನು ಮನಬಂದಂತೆ ಲಿವೀಂಗ್ ಸ್ಟೋನ್ ದಂಡಿಸುತ್ತಾರೆ. ಈ ಹಿಂದೆ ರಶೀದ್ ಖಾನ್ ಅವರ ಮೂರು ಎಸೆತವನ್ನು ಸಿಕ್ಸರ್ಗೆ ಅಟ್ಟಿದ್ದರು.ಈವರೆಗೂ ರಶೀದ್ ವಿರುದ್ಧ ಲಿವೀಂಗ್ ಸ್ಟೋನ್ 115 ರನ್ ಗಳಿಸಿದ್ದಾರೆ.ಇನ್ನು ರಶೀದ್ ಖಾನ್ ನಾಲ್ಕು ಬಾರಿ ಲಿವೀಂಗ್ ಸ್ಟೋನ್ ಅವರನ್ನು ಔಟ್ ಮಾಡಿದ್ದಾರೆ.
ಗುರ್ಬಾಜ್ ವರ್ಸಸ್ ಮಾರ್ಕ್ ವುಡ್
ಇತ್ತಿಚೆಗೆ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ರೆಹಮಾಹುಲ್ಲಾ ಗುರ್ಬಾಜ್ ತಾವೊಬ್ಬ ತಂಡದ ಸ್ಫೋಟಕ ಬ್ಯಾಟರ್ ಅನ್ನೋದನ್ನು ನಿರೂಪಿಸಿದ್ದರು. 45 ಎಸೆತದಲ್ಲಿ 4 ಬೌಂಡರಿ 6 ಸಿಕ್ಸರ್ ಸಿಡಿಸಿ 84 ರನ್ ಚಚ್ಚಿದ್ದರು. ಗುರ್ಬಾಜ್ ವೇಗಿ ಮಾರ್ಕ್ ವುಡ್ ಅವರನ್ನು ಹೇಗೆ ಎದುರಿಸುತ್ತಾರೆ ಅನ್ನೋದು ಕುತುಹಲಕಾರಿಯಾಗಿದೆ.