ಇಂಗ್ಲೆಂಡ್ನಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿ ಗೆದ್ದಿಲ್ಲ ಎಂದು ಹೇಳುವ ಹಾಗಿಲ್ಲ. 15 ವರ್ಷಗಳ ಹಿಂದೆ ಸರಣಿ ಗೆದ್ದ ಸವಿ ನೆನಪಿದೆ. ಈಗ ಆಂಗ್ಲರ ನಾಡಲ್ಲಿ ಮತ್ತೊಮ್ಮೆ ಟೆಸ್ಟ್ ಸರಣಿ ಗೆಲ್ಲೋ ಕನಸಿನಲ್ಲಿ ಟೀಮ್ಇಂಡಿಯಾವಿದೆ. 5 ಪಂದ್ಯಗಳ ಟೆಸ್ಟ್ ಸರಣಿಯ್ಲಿ ಭಾರತ 2-1ರಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದು, ಉಳಿದ ಒಂದು ಟೆಸ್ಟನ್ನು ಗೆಲ್ಲಬೇಕು ಅಥವಾ ಡ್ರಾ ಮಾಡಿಕೊಳ್ಳಬೇಕು. ಆಗ ಮಾತ್ರ 2007ರ ಬಳಿಕ ಆಂಗ್ಲರ ನಾಡಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿ ಗೆಲ್ಲೋ ಕನಸು ನನಸಾಗಲಿದೆ.
ಬರ್ಮಿಂಗ್ ಹ್ಯಾಂನ ಎಡ್ಜ್ಬಾಸ್ಟನ್ ನಲ್ಲಿ ನಡೆಯು ಏಕೈಕ ಟೆಸ್ಟ್ ಡ್ರಾ ಮಾಡಿಕೊಂಡರೆ ಅದೇ ಟೀಮ್ ಇಂಡಿಯಾದ ದೊಡ್ಡ ಸಾಧನೆ. ಇಂಗ್ಲೆಂಡ್ ಅಂದುಕೊಂಡಷ್ಟು ದುರ್ಬಲ ತಂಡವಲ್ಲ.ತವರಿನಲ್ಲಂತೂ ಅಷ್ಟು ಸುಲಭವಾಗಿ ಮಣಿಸುವುದು ಅಸಾಧ್ಯ. ಜೊತೆಗೆ ನ್ಯೂಜಿಲೆಂಡ್ ತಂಡವನ್ನು 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮಕಾಡೆ ಮಲಗಿಸಿದ ಆತ್ಮವಿಶ್ವಾಸವೂ ಇದೆ.
ನ್ಯೂಜಿಲೆಂಡ್ ತಂಡವನ್ನು ಮೂರಕ್ಕೆ ಮೂರು ಟೆಸ್ಟ್ ಪಂದ್ಯಗಳಲ್ಲೂ ಇಂಗ್ಲೆಂಡ್ ಸೋಲಿಸಿ ವೈಟ್ ವಾಶ್ ಮಾಡಿ ಕಳುಹಿಸಿದೆ. ಮೂರು ಟೆಸ್ಟ್ಗಳನ್ನೂ ಇಂಗ್ಲೆಂಡ್ ಚೇಸ್ ಮಾಡಿ ಗೆದ್ದಿದೆ. ಅದು ಒನ್ಡೇ-ಟಿ20 ಸ್ಟೈಲ್ನಲ್ಲಿ ಬ್ಯಾಟಿಂಗ್ ಮಾಡಿ ಎದುರಾಳಿ ಬೌಲರ್ಗಳ ಬೆವರಿಳಿಸಿದೆ.
ಲೀಡ್ಸ್‌ನಲ್ಲಿ ನಡೆದ 3ನೇ ಹಾಗೂ ಕೊನೆಯ ಟೆಸ್ಟ್ ಗೆಲ್ಲಲು ಇಂಗ್ಲೆಂಡ್ಗೆ 296 ರನ್ ಟಾರ್ಗೆಟ್ ಸಿಕ್ಕಿತು. ಜಸ್ಟ್ 54.3 ಓವರ್ನಲ್ಲಿ ಈ ಟಾರ್ಗೆಟ್ ಬೆನ್ನಟ್ಟಿ ಗೆದ್ದಿದ್ದಾರೆ ಆಂಗ್ಲರು. ಇದೆಲ್ಲಾ ಲೆಕ್ಕಾಚಾರವನ್ನು ನೋಡಿದರೆ ಟೀಮ್ ಇಂಡಿಯಾಕ್ಕೆ ಕಠಿಣ ಸವಾಲು ಗ್ಯಾರೆಂಟಿ. ಸದ್ಯ ಎಡ್ಜ್ ಬಾಸ್ಟನ್ನಲ್ಲಿ ಫಲಿತಾಂಶ ಏನೇ ಆದರೂ ಸರಣಿ ಮೇಲೆ ಹೆಚ್ಚು ಪರಿಣಾಮ ಬೀರಲ್ಲ ಅನ್ನುವ ಸಮಾಧಾನ ಅಂತೂ ಇದ್ದೇ ಇದೆ.