ಅತಿಥೇಯ ಇಂಗ್ಲೆಂಡ್ ಹಾಗೂ ಪ್ರವಾಸಿ ನ್ಯೂಜಿ಼ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಲಿದೆ. ಹೆಂಡಿಗ್ಲೆಯ ಲೀಡ್ಸ್ ಮೈದಾನದಲ್ಲಿ ನಡೆಯುವ ಅಂತಿಮ ಟೆಸ್ಟ್ಗಾಗಿ ಉಭಯ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ.
ಬೆನ್ ಸ್ಟೋಕ್ಸ್ ನಾಯಕತ್ವ ಹಾಗೂ ಬ್ರೆಂಡನ್ ಮೆಕ್ಕಲಂ ತರಬೇತಿ ಅಡಿಯಲ್ಲಿ ಇಂಗ್ಲೆಂಡ್ ಹೊಸ ಉತ್ಸಾಹದಲ್ಲಿದೆ. ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಇಂಗ್ಲೆಂಡ್, 2-0 ಅಂತರದಲ್ಲಿ ಈಗಾಗಲೇ ಸರಣಿ ವಶಪಡಿಸಿಕೊಂಡಿದೆ. ಆದರೆ ಕಿವೀಸ್ ಪಡೆಯನ್ನ ಕ್ಲೀನ್ ಸ್ವೀಪ್ ಮಾಡುವತ್ತ ಗುರಿಯಿಟ್ಟಿರುವ ಇಂಗ್ಲೆಂಡ್, ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಹೊಸ ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಗೆಲುವಿನ ಮೂಲಕ ಜುಲೈ ಆರಂಭದಲ್ಲಿ ನಡೆಯುವ ಭಾರತ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನಾಡಲು ಆಂಗ್ಲರು ಎದುರು ನೋಡುತ್ತಿದ್ದಾರೆ.
ಆದರೆ ಸತತ ಎರಡು ಟೆಸ್ಟ್ಗಳಲ್ಲಿ ಸೋಲು ಕಂಡಿರುವ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಸ್ ನ್ಯೂಜಿ಼ಲೆಂಡ್, ಬಲಿಷ್ಠ ಕಮ್ಬ್ಯಾಕ್ ಮಾಡುವ ತವಕದಲ್ಲಿದೆ. ಕಳೆದ 2 ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನದ ನಡುವೆಯೂ ಸೋಲಿನ ಆಘಾತ ಕಂಡಿರುವ ಕಿವೀಸ್, 3ನೇ ಟೆಸ್ಟ್ಗೆ ವಿಭಿನ್ನ ರಣತಂತ್ರದೊಂದಿಗೆ ಅಖಾಡಕ್ಕಿಳಿಬೇಕಿದೆ. ನಾಯಕ ಕೇನ್ ವಿಲಿಯಂಸನ್ ಕಮ್ ಬ್ಯಾಕ್ ಮಾಡಿರುವುದು ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದ್ದರು, ಫಾರ್ಮ್ ವೈಫಲ್ಯ ಅನುಭವಿಸುತ್ತಿರುವ ವಿಲಿಯಂಸನ್ ಮೇಲೆ ಹೆಚ್ಚಿನ ಜವಾಬ್ದಾರಿ ಎದುರಾಗಿದೆ.
ಸಂಭಾವ್ಯ ತಂಡಗಳು:
ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್ಸ್ಟೋ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್, ಮ್ಯಾಟಿ ಪಾಟ್ಸ್, ಜೇಮೀ ಓವರ್ಟನ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್.
ನ್ಯೂಜಿ಼ಲೆಂಡ್: ಟಾಮ್ ಲಾಥಂ, ವಿಲಿ ಯಂಗ್, ಕೇನ್ ವಿಲಿಯಂಸನ್ (ನಾಯಕ), ಡ್ವೇನ್ ಕಾನ್ವೆ, ಡೆರಿಲ್ ಮೆಚಲ್, ಟಾಮ್ ಬ್ಲಂಡಲ್, ಮಿಚೆಲ್ ಬ್ರಾಸ್ವೆಲ್, ಟಿಮ್ ಸೌಥಿ, ಮ್ಯಾಟ್ ಹೆನ್ರಿ, ಟ್ರೆಂಟ್ ಬೋಲ್ಟ್, ನೀಲ್ ವ್ಯಾಗ್ನರ್.
ಪಂದ್ಯ: ಇಂಗ್ಲೆಂಡ್ v ನ್ಯೂಜಿ಼ಲೆಂಡ್ 3ನೇ ಟೆಸ್ಟ್
ಸ್ಥಳ: ಹೆಡಿಂಗ್ಲಿ, ಲೀಡ್ಸ್, ಜೂ.23-27,
ಸಮಯ: ಮಧ್ಯಾಹ್ನ 3.30ರಿಂದ