ಭಾರತ ವಿರುದ್ಧದ ಟಿ20 ಸರಣಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಮಾಡಲಾಗಿದೆ. ಲಂಕಾಶೈರ್ ವೇಗಿ 34 ವರ್ಷದ ರಿಚರ್ಡ್ ಗ್ಲಿಸನ್ ಚೊಚ್ಚಲ ಬಾರಿಗೆ ಇಂಗ್ಲೆಂಡ್ ತಂಡವನ್ನು ಸೇರಿಸಿಕೊಂಡಿದ್ದಾರೆ. ಗ್ಲಿಸನ್ ಪ್ರಥಮ ದರ್ಜೆ ಕ್ರಿಕೆಟ್ನ್ನು 27ನೇ ವರ್ಷದಲ್ಲಿ ಆಡಿ ಗಮನ ಸೆಳೆದಿದ್ದರು.
ಜೋಸ್ ಬಟ್ಲರ್ ತಂಡವನ್ನು ಮುನ್ನಡೆಸುತ್ತಿದ್ದು, ಮೊಯಿನ್ ಅಲಿ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಹ್ಯಾರಿ ಬ್ರೂಕ್, ರಿಚರ್ಡ್ ಗ್ಲಿಸನ್, ಕ್ರಿಸ್ ಜೋರ್ಡಾನ್, ಲಿಯಂ ಪ್ಲಂಕೆಟ್, ಲಿವಿಂಗ್ ಸ್ಟೋನ್ ತಂಡದಲ್ಲಿದ್ದಾರೆ. ಡೇವಿಡ್ ಮಲಾನ್, ತೈಮಲ್ ಮಿಲ್ಸ್, ಮ್ಯಾಥ್ಯೂ ಪರ್ಕಿನ್ಸನ್ಗೂ ತಂಡದಲ್ಲಿ ಸ್ಥಾನಸಿಕ್ಕಿದೆ. ಜೇಸನ್ ರಾಯ್, ಫಿಲ್ ಸಾಲ್ಟ್, ರೀಸ್ ಟಾಪ್ಲೆ ಮತ್ತು ಡೇವಿಡ್ ವಿಲ್ಲಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಟ್ರಂಪ್ ಕಾರ್ಡ್ ಸ್ಪಿನ್ನರ್ ಆದಿಲ್ ರಶೀದ್ ಮೆಕ್ಕಾ ಪ್ರವಾಸದಲ್ಲಿರುವುದರಿಂದ ತಂಡದಿಂದ ಹೊರಗುಳಿದಿದ್ದಾರೆ. ಇಯಾನ್ ಮೊರ್ಗಾನ್ ನಿವೃತ್ತಿಯ ನಂತರ ಹ್ಯಾರಿ ಬ್ರೂಕ್ ಏಕದಿನ ಹಾಗೂ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಟಿ20 ಸರಣಿ ಏಜಿಸ್ ಬೌಲ್ನಲ್ಲಿ ಜುಲೈ 7ರಿಂದ ಆರಂಭವಾಗಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವೆ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.