ಕೋವಿಡ್-19 ಸೋಂಕಿಗೆ ತುತ್ತಾಗಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ನ್ಯೂಜಿ಼ಲೆಂಡ್ ತಂಡದ ನಾಯಕ ಕೇನ್ ವಿಲಿಯಂಸನ್, ಇಂದಿನಿಂದ(ಜೂ.23) ಆರಂಭವಾಗಲಿರುವ 3ನೇ ಟೆಸ್ಟ್‌ಗೆ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.
ಎರಡನೇ ಟೆಸ್ಟ್‌ಗೂ ಮುನ್ನ ದಿನದಂದು ಕೋವಿಡ್-19 ಸೋಂಕಿಗೆ ತುತ್ತಾಗಿದ್ದ ಕೇನ್ ವಿಲಿಯಂಸನ್, ಕೊನೆ ಹಂತದಲ್ಲಿ ಪಂದ್ಯದಿಂದ ಹೊರಗುಳಿದಿದ್ದರು. ಹೀಗಾಗಿ ವಿಲಿಯಂಸನ್ ಅನುಪಸ್ಥಿತಿಯಲ್ಲಿ ಟಾಮ್ ಲಾಥಂ ಕಿವೀಸ್ ತಂಡವನ್ನ ಮುನ್ನಡೆಸಿದ್ದರು. ಇದೀಗ ಕೋವಿಡ್‌ನಿಂದ ಗುಣಮುಖರಾಗಿರುವ ವಿಲಿಯಂಸನ್, ತಂಡಕ್ಕೆ ಮರಳಿದ್ದಾರೆ. ಅಲ್ಲದೇ ನೈಲ್ ವ್ಯಾಗ್ನರ್ ಹಾಗೂ ಅಜಾ಼ಜ್ ಪಟೇಲ್ ಸಹ 3ನೇ ಟೆಸ್ಟ್ ಪಂದ್ಯಕ್ಕೆ 13 ಮಂದಿ ಆಟಗಾರರಲ್ಲಿ ಕಾಣಿಸಿಕೊಳ್ಳಿದ್ದಾರೆ. ಕೋವಿಡ್‌ನಿಂದಾಗಿ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕೇನ್ ವಿಲಿಯಂಸನ್, ಮತ್ತೊಮ್ಮೆ ತಂಡಕ್ಕೆ ಮರಳಿರುವ ಬಗ್ಗೆ ಸಂಸತ ಹೊಂದಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡಿದ ಅವರು, 2ನೇ ಟೆಸ್ಟ್‌ನಲ್ಲಿ ಉಭಯ ತಂಡಗಳ
ಸಮಬಲದ ಪ್ರದರ್ಶನ ನೀಡಿದರು, ಜಾನಿ ಬೈರ್ಸ್ಟೋವ್ ಅದ್ಭುತ ಬ್ಯಾಟಿಂಗ್ ಇಂಗ್ಲೆಂಡ್ ಗೆಲುವಿಗೆ ಕಾರಣವಾಯಿತು ಎಂದಿದ್ದಾರೆ.
ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನೀರಸ ಪ್ರದರ್ಶನ ನೀಡಿರುವ ನ್ಯೂಜಿ಼ಲೆಂಡ್ 0-2 ಅಂತರದ ಹಿನ್ನಡೆ ಹೊಂದಿದೆ. ಈಗಾಗಲೇ ಸರಣಿ ಗೆಲುವಿನ ಆಸೆ ಕೈಚೆಲ್ಲಿರುವ ಕಿವೀಸ್, 3ನೇ ಟೆಸ್ಟ್ ಪಂದ್ಯವನ್ನ ಗೆದ್ದು ಗೆಲುವಿನೊಂದಿಗೆ ಸರಣಿ ಮುಗಿಸುವ ಲೆಕ್ಕಾಚಾರದಲ್ಲಿದೆ. ಮತ್ತೊಂದೆಡೆ ಭರ್ಜರಿ ಫಾರ್ಮ್‌ನಲ್ಲಿರುವ ಅತಿಥೇಯ ಇಂಗ್ಲೆಂಡ್ 3-0 ಅಂತರದಲ್ಲಿ ಸರಣಿ ಗೆದ್ದು ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ.
ಜೇಮ್ಸ್ ಆಂಡರ್ಸನ್ ಔಟ್:
ನ್ಯೂಜಿ಼ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಿಂದ ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಹೊರಗುಳಿದಿದ್ದಾರೆ. ಆಂಗ್ಲರ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ಆಂಡರ್ಸನ್, ಗಾಯದ ಸಮಸ್ಯೆಯಿಂದಾಗಿ 3ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯವಾಗಿದ್ದು, ಇವರ ಬದಲಿಗೆ ಜೇಮೀ ಓವರ್ಟನ್, ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವಾಡಲು ಸಜ್ಜಾಗಿದ್ದಾರೆ. ಈ ನಡುವೆ ಅನಾರೋಗ್ಯದಿಂದ ಬಳಲುತ್ತಿದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಚೇತರಿಸಿಕೊಂಡಿದ್ದು, 3ನೇ ತಂಡದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.