ಓಲ್ಲಿ ಪೋಪ್(82), ಜೋ ರೂಟ್(86*) ಹಾಗೂ ಜಾನಿ ಬೈರ್ಸ್ಟೋವ್(71*) ಅವರ ಅದ್ಭುತ ಬ್ಯಾಟಿಂಗ್‌ನಿಂದ ನ್ಯೂಜಿ಼ಲೆಂಡ್ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಅತಿಥೇಯ ಇಂಗ್ಲೆಂಡ್ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ನರಿಗೆ ಕ್ಲೀನ್ ಸ್ವೀಪ್ ಆಘಾತ ನೀಡಿದೆ.
ಹೆಂಡಿಂಗ್ಲಿಯಲ್ಲಿ ನಡೆದ ಪಂದ್ಯದ 5ನೇ ದಿನದಂದು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಗೆಲುವಿನ 113 ರನ್‌ಗಳಿಸಬೇಕಿದ್ದ ಇಂಗ್ಲೆಂಡ್, 54.2 ಓವರ್‌ಗಳಲ್ಲಿ 3 ವಿಕೆಟ್‌ಗೆ 296 ರನ್‌ಗಳಿಸುವ ಮೂಲಕ ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ3-0 ಅಂತರದಿಂದ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿತು.

183/2 ರನ್‌ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್, ದಿನದಾಟದ ಆರಂಭದಲ್ಲೇ ಓಲ್ಲಿ ಪೋಪ್(82) ವಿಕೆಟ್ ಕಳೆದುಕೊಂಡಿತು. ನಂತರ ಕಣಕ್ಕಿಳಿದ ಜಾನಿ ಬೈರ್ಸ್ಟೋವ್ 71* ರನ್(44 ಬಾಲ್, 9 ಬೌಂಡರಿ, 3 ಸಿಕ್ಸ್) ಸ್ಪೋಟಕ ಆಟವಾಡಿದರು. ನ್ಯೂಜಿ಼ಲೆಂಡ್ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದ ಬೈರ್ಸ್ಟೋವ್, ವೇಗದ ಅರ್ಧಶತಕ ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಜೋ ರೂಟ್(86*) ರನ್‌ಗಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಜಾನಿ ಬೈರ್ಸ್ಟೋವ್ ಅವರ ಸ್ಪೋಟಕ ಬ್ಯಾಟಿಂಗ್‌ನಿಂದಾಗಿ ಇಂಗ್ಲೆಂಡ್ 5ನೇ ದಿನದಾಟದ 15.2 ಓವರ್‌ಗಳಲ್ಲಿ 113 ರನ್‌ಗಳಿಸಿತು. ನ್ಯೂಜಿ಼ಲೆಂಡ್ ಪರ ಟಿಮ್ ಸೌಥಿ ಹಾಗೂ ಮೈಕಲ್ ಬ್ರೇಸ್ವೆಲ್ ತಲಾ 1 ವಿಕೆಟ್ ಪಡೆದರು.
5ನೇ ಟೆಸ್ಟ್ ಪಂದ್ಯದಲ್ಲಿ ಪರಿಣಾಮಕಾರಿ ಸ್ಪಿನ್ ದಾಳಿ ನಡೆಸಿದ ಜ್ಯಾಕ್ ಲೀಚ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ. ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್ ಹಾಗೂ ನ್ಯೂಜಿ಼ಲೆಂಡ್‌ನ ಡೆರಿಲ್ ಮಿಚೆಲ್ ಸರಣಿ ಶ್ರೇಷ್ಠ ಪ್ರಶಸ್ತಿ ಹಂಚಿಕೊಂಡರು.
ಸಂಕ್ಷಿಪ್ತ ಸ್ಕೋರ್:
ನ್ಯೂಜಿ಼ಲೆಂಡ್: 329 ಹಾಗೂ 326
ಇಂಗ್ಲೆಂಡ್: 360 ಹಾಗೂ 296/3