ದಕ್ಷಿಣ ಆಫ್ರಿಕಾ ತಂಡದ ಆಲ್ರೌಂಡರ್ ಡ್ವೇನ್ ಪ್ರಿಟೋರಿಯಸ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಪ್ರಿಟೋರಿಯಸ್ ಮೂರು ಆವೃತ್ತಿಯ ಕ್ರಿಕೆಟ್ನಲ್ಲಿ ಆಡಿದ್ದಾರೆ. 30 ಟಿ20, 27 ಏಕದಿನ ಹಾಗೂ 3 ಟೆಸ್ಟ್ ಆಡಿದ್ದಾರೆ. ಎರಡು ವಿಶ್ವಕಪ್ನ ಭಾಗವಾಗಿದ್ದರು. 2016ರಲ್ಲಿ ಟೆಸ್ಟ್ ಗೆ ಪದಾರ್ಪಣೆ ಮಾಡಿದ್ದರು.
ದಕ್ಷಿಣ ಕ್ರಿಕೆಟ್ ಮಂಡಳಿ ತನ್ನ ವೆಬ್ ಸೈಟ್ನಲ್ಲಿ, 33 ವರ್ಷದ ಡ್ವೇನ್ ಪ್ರಿಟೋರಿಯಸ್ ಇದು ನನ್ನ ಕಠಿಣ ನಿರ್ಧಾರ ಎಂದು ಹೇಳಿದ್ದಾರೆ.
ನಿವೃತ್ತಿ ನಂತರ ಟಿ20 ಮತ್ತು ಚುಟುಕು ಆವೃತ್ತಿಯತ್ತ ಹೆಚ್ಚು ಗಮನ ನೀಡುವುದಾಗಿ ತಿಳಿಸಿದ್ದಾರೆ. ತಮ್ಮ ಕೋಚ್, ಸಹ ಆಟಗಾರರಿಗೆ ಹಾಗೂ ತಂಡದ ಮಾಜಿ ಕೋಚ್ ಫಾಫ್ ಡುಪ್ಲೆಸಿಸ್ಗೆ ವಿಶೇಷ ಧನ್ಯವಾದವನ್ನು ತಿಳಿಸಿದ್ದಾರೆ.
ಕ್ರಿಕೆಟ್ ಅಭಿಮಾನಿಗಳು ನೀಡಿದ ಬೆಂಬಲಕ್ಕೂ ಧನ್ಯವಾದ ಹೇಳಿದ್ದಾರೆ.
ಆಲ್ರೌಂಡರ್ ಡ್ವೇನ್ ಪ್ರಿಟೋರಿಯಸ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಲಿದ್ದಾರೆ.