ಇಂಡಿಯನ್ ಪ್ರೀಮಿಯರ್ ಲೀಗ್ ನ ಯಶಸ್ವಿ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅಗ್ರ ಸ್ಥಾನ. ಈ ತಂಡಕ್ಕೆ ದೇಶದ ಎಲ್ಲಾ ಭಾಗಗಳಲ್ಲೂ ಅಭಿಮಾನಿಗಳು ಇದ್ದಾರೆ. ಸಿಎಸ್ಕೆ ಐಪಿಎಲ್ ನಲ್ಲಿ ಹಲವು ದಾಖಲೆಗಳಿಗೆ ತನ್ನ ಹೆಸರನ್ನು ನಮೂದಿಸಿಕೊಂಡಿದೆ. ದಾಖಲೆಗಳ ಪಟ್ಟಿಯಲ್ಲಿ ಮತ್ತೊಂದು ಚೆನ್ನೈ ತಂಡ ಸೇರಿಕೊಂಡಿದೆ. ಆದರೆ ಈ ಬಾರಿ ತಂಡ ಕಳಪೆ ಪ್ರದರ್ಶನದಿಂದ ಸದ್ದು ಮಾಡುತ್ತಿದೆ. catches win the matches ಎಂಬ ಮಾತು ಚೆನ್ನೈಗೆ ಪದೆ ಪದೆ ಕೇಳುವಂತಾಗಿದೆ.
IPL 2022 ರ ಋತುವಿನಲ್ಲಿ ಚೆನ್ನೈನ ಫೀಲ್ಡಿಂಗ್ ವಿಶೇಷವಾಗಿಲ್ಲ. ಇದರ ನಷ್ಟ ತಂಡಕ್ಕೆ ನಿರಂತರವಾಗಿ ಆಗುತ್ತಿದೆ. ಈ ಋತುವಿನಲ್ಲಿ ಚೆನ್ನೈ ಹೆಸರಿನಲ್ಲಿ ಅತಿ ಹೆಚ್ಚು ಕ್ಯಾಚ್ಗಳನ್ನು ಬಿಟ್ಟ ದಾಖಲೆ ದಾಖಲಾಗಿದೆ. ಚೆನ್ನೈ ಈ ಋತುವಿನಲ್ಲಿ ಇದುವರೆಗೆ 11 ಕ್ಯಾಚ್ಗಳನ್ನು ಕೈಬಿಟ್ಟಿದೆ. ಇದು ಪಂದ್ಯದ ಫಲಿತಾಂಶದ ಮೇಲೆ ನಿರಂತರವಾಗಿ ಪರಿಣಾಮ ಬೀರುತ್ತದೆ.
ಇದಕ್ಕೂ ಮೊದಲು, ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2022 ರ 38 ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಪಂಜಾಬ್ ಕಿಂಗ್ಸ್ ವಿರುದ್ಧ ಬೌಲಿಂಗ್ ಮಾಡಲು ನಿರ್ಧರಿಸಿತು. ಪಂಜಾಬ್ ಮೊದಲು ಬ್ಯಾಟ್ ಮಾಡಿ 4 ವಿಕೆಟ್ ಗೆ 187 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಸಿಎಸ್ಕೆ 20 ಓವರ್ ಗಳಲ್ಲಿ 6 ವಿಕೆಟ್ ಗೆ 176 ರನ್ ಸೇರಿಸಿ 11 ರನ್ ಗಳಿಂದ ಸೋಲು ಕಂಡಿತು.
ಈ ಪಂದ್ಯದಲ್ಲಿ ಪಂಜಾಬ್ ಬ್ಯಾಟ್ ಮಾಡುವಾಗ ಜಡೇಜಾ ಒಂಬತ್ತನೇ ಓವರ್ ಬೌಲಿಂಗ್ ನಡೆಸಿದರು. ಓವರ್ ನ ಐದನೇ ಎಸೆತದಲ್ಲಿ ರಾಜಪಕ್ಸೆ ಮಿಡ್ ವಿಕೆಟ್ ಮೇಲೆ ಚೆಂಡನ್ನು ಬಾರಿಸಿದರು. ಆಗ ಮಿಚೆಲ್ ಸ್ಯಾಂಟ್ನರ್ ಕ್ಯಾಚ್ ಬಿಟ್ಟರು. ಇದಕ್ಕೂ ಮೊದಲು ರಾಜಪಕ್ಸೆ, ಅವರಿಗೆ ಮೊದಲ ಜೀವದಾನ ಲಭಿಸಿತ್ತು. ಪಂದ್ಯದ ಏಳನೇ ಓವರ್ ನಲ್ಲಿ ಜಡೇಜಾ ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ ಕ್ಯಾಚ್ ಬಿಟ್ಟು ಕೈ ಸುಟ್ಟುಕೊಂಡರು.