ದ್ರಾವಿಡ್ ಸರ್ ಸಲಹೆ… ನನ್ನ ಕಂ ಬ್ಯಾಕ್ ಗೆ ಕಾರಣ Dravid saaksha tv
ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಹೆಡ್ ಕೋಚ್ ಎಂದು ಘೋಷಣೆ ಆಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳಲ್ಲಿ ಒಂದು ರೀತಿ ಕುತೂಹಲಕಾರಿ ಆಸಕ್ತಿ ಮನೆ ಮಾಡಿತ್ತು. ಅದಕ್ಕೆ ಕಾರಣ ದ್ರಾವಿಡ್ ಅವರ ವ್ಯಕ್ತಿತ್ವ ಹಾಗೇ ಅವರ ಕಮಿಟ್ ಮೆಂಟ್.
ಹೌದು..! ರಾಹುಲ್ ದ್ರಾವಿಡ್ ವಿಶ್ವ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಟಗಾರ. ಜಂಟಲ್ ಮ್ಯಾನ್ ಗೇಮ್ ನ ರಿಯಲ್ ಜಂಟಲ್ ಮ್ಯಾನ್ ನಮ್ಮ ರಾಹುಲ್ ದ್ರಾವಿಡ್. ಅವರು ಆಡುವುದನ್ನ ನಿಲ್ಲಿಸಿದ್ದರೂ ಮೈದಾನಲ್ಲಿಯೇ ಇದ್ದು ಕ್ರಿಕೆಟ್ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಈ ಹಿಂದೆ ಭಾರತ ಕಿರಿಯ ತಂಡದ ಕೋಚ್ ಆಗಿದ್ದ ದ್ರಾವಿಡ್, ಯುವ ಪ್ರತಿಭೆಗಳನ್ನು ಹೆಕ್ಕಿ ತೆಗೆದು ಪ್ರೊತ್ಸಾಹ ನೀಡಿದ್ದರು. ಈಗ ಟೀಂ ಇಂಡಿಯಾದಲ್ಲಿ ಯುವಕರ ಆರ್ಭಟ ನಡೆಯುತ್ತಿದೆ ಅಂದ್ರೆ ಅದಕ್ಕೆ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನವೇ ಪ್ರಮುಖ ಕಾರಣ.
ಹೀಗೆ ಕಿರಿಯ ತಂಡದ ಹೆಡ್ ಕೋಚ್ ಆಗಿದ್ದ ದ್ರಾವಿಡ್ ಇದೀಗ ಟೀಂ ಇಂಡಿಯಾದ ದ್ರೋಣಾಚಾರ್ಯ. ಹೀಗಾಗಿ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈ ಮಧ್ಯೆ ಕನ್ನಡಿಗ ಮಯಾಂಕ್ ಅಗರ್ ವಾಲ್ ದ್ರಾವಿಡ್ ಅವರನ್ನ ಹಾಡಿ ಹೊಗಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನನ್ನ ಕಂ ಬ್ಯಾಕ್ ಗೆ ರಾಹುಲ್ ಸರ್ ಕಾರಣ ಎಂದಿದ್ದಾರೆ.
ಹೌದು..! ಮಯಾಂಕ್ ಅಗರ್ ವಾಲ್ ಕಿವೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮಿಂಚು ಹರಿಸಿದ್ದರು. ಮುಂಬೈ ನ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 150 ರನ್ ಗಳಿಸಿದ್ದ ಮಯಾಂಕ್, ಎರಡನೇ ಇನ್ನಿಂಗ್ಸ್ ನಲ್ಲಿ 60 ರನ್ ಗಳಿಸಿದ್ದರು. ಆ ಮೂಲಕ ತಂಡ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ ಟೆಸ್ಟ್ ರ್ಯಾಂಕಿಂಗ್ ನಲ್ಲಿ 11ವ ಸ್ಥಾನಕ್ಕೆ ತಲುಪಿದ್ದಾರೆ.
ತಮ್ಮ ಈ ಪ್ರದರ್ಶನಕ್ಕೆ ರಾಹುಲ್ ದ್ರಾವಿಡ್ ನೀಡಿದ ಸಲಹೆ ಕಾರಣ ಎಂದು ಮಯಾಂಕ್ ಇದೀಗ ಹೇಳಿಕೊಂಡಿದ್ದಾರೆ. ನಿನಗೆ ಈಗ ರನ್ ತುಂಬಾ ಅಗತ್ಯ ಎಂದು ನನಗೆ ಗೊತ್ತು. ರನ್ ಗಳಿಸದೇ ಹಿಂಸೆ ಪಡುತ್ತಿರುವ ನಿನ್ನ ನೋವು ನನಗೆ ಅರ್ಥಆಗುತ್ತದೆ. ನಿನಗಿರುವ ಎಮೋಷನ್ ಜೊತೆಗೆ ಮಾನಸಿಕ ಶಕ್ತಿ.. ಆಲೋಚನೆಗಳನ್ನು ಹಿಡಿತದಲ್ಲಿ ಇಟ್ಟಿಕೋ. ತಾಳ್ಮೆಯಿಂದ ಆಡು ಖಂಡಿತವಾಗಿ ಫಲಿತಾಂಶ ಸಾಧಿಸುವೆ. ಇನ್ನು ಬ್ಯಾಟಿಂಗ್ ಟೆಕ್ನಿಕ್ ವಿಷಯದಲ್ಲಿ ಹೇಳಲು ಏನು ಇಲ್ಲ. ಹಿಂದೆ ರನ್ ಗಳಿಸಲು ಏನು ಮಾಡುತ್ತಿದ್ದೋ ಅದನ್ನೇ ಮಾಡು.. ರನ್ ತಾನಾಗಿಯೇ ಬರುತ್ತೆ ಎಂದು ಮಯಾಂಕ್ ಬಳಿಕ ದ್ರಾವಿಡ್ ಹೇಳಿದ್ದರಂತೆ. ಅದನ್ನ ಮನಸ್ಸಿನಲ್ಲಿಟ್ಟುಕೊಂಡು ಕಿವೀಸ್ ವಿರುದ್ಧದ 2ನೇ ಪಂದ್ಯದಲ್ಲಿ ಆಟವಾಡಿದೆ ಎಂದು ಮಯಾಂಕ್ ಹೇಳಿಕೊಂಡಿದ್ದಾರೆ.