ದಕ್ಷಿಣ ಆಫ್ರಿಕಾ ತಂಡದ ಯುವ ಬ್ಯಾಟರ್ ಡೇವಾಲ್ಡ್ ಬ್ರೇವಿಸ್ ಕ್ರಿಕೆಟ್ ಸೌತ್ ಆಫ್ರಿಕಾ ಟಿ20 ಚಾಲೆಂಜ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಮರಿ ಎಬಿಡಿ ವಿಲಿಯರರ್ಸ್ ಎಂದೇ ಖ್ಯಾತರಾಗಿರುವ ಡೇವಾಲ್ಡ್ ಬ್ರೇವಿಸ್ ಕೇವಲ 57 ಎಸೆತದಲ್ಲಿ 162 ರನ್ ಗಳಿಸಿ ದಾಖಲೆ ಬರೆದರು. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಅತಿ ಕಿರಿಯ ಸೌತ್ ಆಫ್ರಿಕಾದ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ನೈಟ್ಸ್ ತಂಡದ ಮೇಲೆ ಸವಾರಿ ಮಾಡಿದ ಡೇವಾಲ್ಡ್ ಬ್ರೇವಿಸ್ 35 ಎಸೆತದಲ್ಲಿ ಶತಕ ಸಿಡಿಸಿ ಡೇವಿಡ್ ಮಿಲ್ಲರ್ ಅವರ ದಾಖಲೆಯನ್ನು ಸರಿಗಟ್ಟಿದರು. 18 ಎಸೆತದಲ್ಲಿ ಅರ್ಧ ಶತಕ ಸಿಡಿಸಿದಿರು, ಒಟ್ಟು 13 ಬೌಂಡರಿ 13 ಸಿಕ್ಸರ್ ಸಿಡಿಸಿದರು.
ಜೊತೆಗೆ ಟಿ20ಯಲ್ಲಿ ವೈಯಯಕ್ತಿ ಅತಿ ಹೆಚ್ಚ ರನ್ ಗಳಿಸಿದ ವಿಶ್ವದ 5ನೇ ಬ್ಯಾಟರ್ ಎನಿಸಿದರು.

ದೇಸಿ ಟೂರ್ನಿಗಳಲ್ಲಿ ವೇಗದ ಶತಕ ಸಿಡಿಸಿದ ದಾಖಲೆ ಕೂಡ ಡೇವಾಲ್ಡ್ ಬ್ರೇವಿಸ್ ಹೆಸರಿನಲ್ಲಿದೆ.
ಡೇವಾಲ್ಡ್ ಬ್ರೇವಿಸ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೈಟಾನ್ಸ್ 3 ವಿಕೆಟ್ ನಷ್ಟಕ್ಕೆ 271 ರನ್ ಕಲೆ ಹಾಕಿತು.