ಸಿಎಸ್ಕೆ VS ಕೆಕೆಆರ್, ಡೆಲ್ಲಿ VS ಮುಂಬೈ ಮತ್ತು ಪಂಜಾಬ್ VS ಬೆಂಗಳೂರು ಪಂದ್ಯ ಮುಗಿದಿದೆ. ಐಪಿಎಲ್ನಲ್ಲಿ ಅಂತ್ಯ ಕಂಡಿರುವ ಈ ಮೂರೂ ಪಂದ್ಯಗಳಿಗೂ ಸಾಮ್ಯತೆ ಇದೆ. ಅಚ್ಚರಿ ಅಂದರೆ ಮೂರೂ ಪಂದ್ಯಗಳಲ್ಲೂ ಚೇಸಿಂಗ್ ಮಾಡಿದ ತಂಡ ಗೆದ್ದಿದೆ. ಟಾಸ್ ಗೆದ್ದವರೇ ಬಾಸ್ ಆಗಿದ್ದಾರೆ.
ಚುಟುಕು ಕ್ರಿಕೆಟ್ನಲ್ಲಿ ಟಾರ್ಗೆಟ್ ಫಿಕ್ಸ್ ಮಾಡುವುದಕ್ಕಿಂತ ಟಾರ್ಗೆಟ್ ಚೇಸ್ ಮಾಡುವುದು ಸುಲಭ ಅನ್ನುವ ಮಾತಿದೆ. ಚೇಸಿಂಗ್ ವೇಳೆ ಪ್ಲಾನ್ ಮಾಡಿಕೊಂಡು ಆಡಬಹುದು ಅನ್ನುವ ಲೆಕ್ಕಾಚಾರವಿದೆ. ಆದರೆ 200 ರನ್ಗಳಿಗಿಂತಲೂ ಹೆಚ್ಚು ಟಾರ್ಗೆಟ್ ಫಿಕ್ಸ್ ಮಾಡಿದ ಮೇಲೂ ಚೇಸಿಂಗ್ ಮಾಡಿದ ತಂಡ ಗೆಲ್ಲೋದಕ್ಕೆ ಆ ಸ್ಪೆಷಲ್ ಎಫೆಕ್ಟ್ ಕಾರಣವಾಗಿದೆ.
ಸೋಮವಾರದಿಂದ- ಶುಕ್ರವಾರದ ತನಕ ಪಂದ್ಯಗಳು ಸಂಜೆ 7.30ಕ್ಕೆ ಆರಂಭವಾಗುತ್ತದೆ. ಮೊದಲ ಇನ್ನಿಂಗ್ಸ್ ಅಂತ್ಯ ಆಗುವಾಗ 9 ರಿಂದ 9.20 ಆಗುತ್ತದೆ. ಪಂದ್ಯದ ಆರಂಭದಲ್ಲಿ ಯಾವುದೇ ಸ್ಪೆಷಲ್ ಎಫೆಕ್ಟ್ ಇರುವುದಿಲ್ಲ. ಆದರೆ ಸುಮಾರು 8.30ರ ನಂತರ ಪಂದ್ಯದ ಸ್ವರೂಪವನ್ನು ಸ್ಪೆಷಲ್ ಎಫೆಕ್ಟ್ ಬದಲಿಸುತ್ತದೆ,
ಯಸ್ ಐಪಿಎಲ್ ಪಂದ್ಯಗಳಿಗೆ ಡ್ಯೂ ಫ್ಯಾಕ್ಟರ್ ಹೆಚ್ಚು ಕಾಡುತ್ತಿದೆ. ಸಾಮಾನ್ಯವಾಗಿ ರಾತ್ರಿ 8.30ರ ನಂತರ ಇಬ್ಬನಿ ಬೀಳಲು ಆರಂಭಿಸುತ್ತದೆ. ಇದು ಬೌಲರ್ಗಳ ಹಿಡಿತ ತಪ್ಪಿಸುತ್ತದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ ಸುಮಾರು 10 ಅಥವಾ 12 ಓವರುಗಳನ್ನು ಆಡಿದ ಮೇಲೆ ಈ ಡ್ಯೂ ಫ್ಯಾಕ್ಟರ್ ಆಟ ಶುರುವಾಗುತ್ತದೆ. ಇದು ಪಂದ್ಯದ ಅಂತ್ಯ ಕಾಣುತ್ತಾ ಹೋದ ಹಾಗೆ ಹೆಚ್ಚಾಗುತ್ತಾ ಹೋಗುತ್ತದೆ.
ಡ್ಯೂ ಫ್ಯಾಕ್ಟರ್ ಲಾಭ ಚೇಸಿಂಗ್ ಮಾಡುವ ತಂಡಗಳಿಗೆ ಸಿಗುತ್ತಿದೆ. ಈ ಹಿಂದೆ ಸಿಎಸ್ಕೆ ನಾಯಕನಾಗಿದ್ದ ಮಹೇಂದ್ರ ಸಿಂಗ್ ಧೋನಿ ಸಂಜೆ 7.30ರ ಬದಲಿಗೆ 8 ಗಂಟೆಗೆ ಪಂದ್ಯ ಆರಂಭಿಸಿ. ಆಗ ಡ್ಯೂ ಫ್ಯಾಕ್ಟರ್ ಲಾಭ ಎರಡೂ ತಂಡಕ್ಕೆ ಸಿಗುತ್ತದೆ ಅನ್ನುವ ಮನವಿ ಸಲ್ಲಿಸಿದ್ದರು. ಆದರೆ ಪಂದ್ಯದ ಅಂತ್ಯ ತಡವಾಗಬಾರದು ಅನ್ನುವ ಕಾರಣಕ್ಕೆ 8 ಗಂಟೆ ಬದಲಿಗೆ 7.30ಕ್ಕೆ ಪಂದ್ಯ ಆರಂಭಿಸಲಾಗುತ್ತಿದೆ.
ಪಂದ್ಯ ಆರಂಣಭವಾಗುತವ ಹೊತ್ತಿನಲ್ಲಿ ಪಿಚ್ ಕೊಂಚ ಬೌಲರ್ಗಳಿಗೆ ನೆರವು ನೀಡುತ್ತದೆ. ಆದರೆ ಇಬ್ಬನಿಯ ಕಾರಣದಿಂದ ಪಿಚ್ ಹಾರ್ಡ್ ಹಾಗಿ ಬ್ಯಾಟ್ ಗೆ ಸಲೀಸಾಗಿ ಚೆಂಡು ಬರುತ್ತದೆ. ಮತ್ತೊಂದೆಡೆ ಔಟ್ ಫೀಲ್ಡ್ ಗೆ ಚೆಂಡು ಪದೇ ಪದೇ ಹೋಗುವುದರಿಂದ ಒದ್ದೆಯಾಗುತ್ತದೆ. ಇದು ಬೌಲರ್ಗಳ ಗ್ರಿಪ್ ತಪ್ಪಿಸುತ್ತದೆ. ಹೀಗೆ ಐಪಿಎಲ್ನಲ್ಲಿ ಟಾಸ್ ಗೆಲ್ಲುವುದು ಪಂದ್ಯ ಗೆಲ್ಲುವಷ್ಟೇ ಮುಖ್ಯ ಅನ್ನುವುದು ಪಕ್ಕಾ ಆಗಿದೆ.