ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ವಿರುದ್ಧದ ಕದನ ಹೈ ಪ್ರೊಫೈಲ್ ಮ್ಯಾಚ್ ಆಗಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಸಮನಾದ ಬಲ ಹೊಂದಿರುವ ತಂಡಗಳ ರಣತಂತ್ರ ಕುತೂಹಲಕ್ಕೆ ಕಾರಣವಾಗಿದೆ.
ವಾರ್ನರ್, ಪೃಥ್ವಿಗೆ ಚಾಲೆಂಜ್
ಡೆಲ್ಲಿ ಕ್ಯಾಪಿಟಲ್ಸ್ ಓಪನರ್ಸ್ ಕಳೆದ 4 ಪಂದ್ಯಗಳಲ್ಲಿ ಸ್ಪೋಟಕ ಆಟ ಆಡಿದ್ದಾರೆ. 7.3 ಓವರ್ ನಲ್ಲಿ 67, 8.4 ಓವರ್ ನಲ್ಲಿ 92, 6.4 ಓವರ್ ನಲ್ಲಿ 83 ಮತ್ತು 4.4 ಓವರ್ ನಲ್ಲಿ 50 ರನ್ ಗಳಿಸಿದ್ದಾರೆ. ಪೃಥ್ವಿ ಷಾ ಮತ್ತು ವಾರ್ನರ್ಗೆ ಈಗ ಟ್ರೆಂಟ್ ಬೋಲ್ಟ್ ಮತ್ತು ಪ್ರಸಿಧ್ ಕೃಷ್ಣ ಚಾಲೆಂಜ್ ಇದೆ.
ಬೋಲ್ಟ್ ಪೃಥ್ವಿ ಷಾ ಅವರನ್ನು 3 ಬಾರಿ ಔಟ್ ಮಾಡಿದ್ದಾರೆ. ವಾರ್ನರ್ ಅವರನ್ನು 2 ಬಾರಿ ಔಟ್ ಮಾಡಿದ್ದಾರೆ. ಮತ್ತೊಂದೆಡೆ ರವಿಚಚಂದ್ರನ್ ಅಶ್ವಿನ್ ಕೂಡ ವಾರ್ನರ್ ಅವರನ್ನು 5 ಬಾರಿ ಔಟ್ ಮಾಡಿದ್ದಾರೆ. ಅಷ್ಟೇ ಅಲ್ಲ ವಾರ್ನರ್ ಗೆ 127 ಎಸೆತಗಳಲ್ಲಿ ಕೇವಲ 159 ರನ್ ಮಾತ್ರ ಬಿಟ್ಟುಕೊಟ್ಟಿದ್ದಾರೆ.
ಬಟ್ಲರ್ ಕಟ್ಟಿಹಾಕಲು ಪ್ಲಾನ್..!
ಈ ಬಾರಿಯ ಐಪಿಎಲ್ನಲ್ಲಿ ಜೋಸ್ ದಿ ಬಾಸ್ ಅನ್ನುವ ಹಾಗೇ ಬಟ್ಲರ್ ಆಡುತ್ತಿದ್ದಾರೆ. ಆದರೆ ಬಟ್ಲರ್ ಕಟ್ಟಿಹಾಕಲು ಡೆಲ್ಲಿ ಕ್ಯಾಪಿಟಲ್ಸ್ ಬಳಿ ಅಸ್ತ್ರವಿದೆ. ಕುಲ್ ದೀಪ್ ಯಾದವ್ ಬಟ್ಲರ್ ಆಟಕ್ಕೆ ಕಡಿವಾಣ ಹಾಕಬಹುದು. ಕುಲ್ ದೀಪ್ ವಿರುದ್ಧ ಬಟ್ಲರ್ 35 ಎಸೆತಗಳಲ್ಲಿ 36 ರನ್ ಮಾತ್ರಗಳಿಸಿದ್ದಾರೆ. ಅಷ್ಟೇ ಅಲ್ಲ 2 ಬಾರಿ ಔಟ್ ಕೂಡ ಆಗಿದ್ದಾರೆ.
ಸಂಖ್ಯಾಶಾಸ್ತ್ರ:
- IPL 15ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪವರ್ ಪ್ಲೇನಲ್ಲಿ 6.72ರ ಎಕಾನಮಿ ಹೊಂದಿದೆ. ಇದು ಡೇವಿಡ್ ವಾರ್ನರ್ ಮತ್ತು ಪೃಥ್ವಿ ಷಾ ಆಟಕ್ಕೆ ಚಾಲೆಂಜ್ ಒಡ್ಡಬಹುದು.
- ವಾಂಖೆಡೆಯಲ್ಲಿ ಸರಾಸರಿ ಮೊತ್ತ 158 ಆಗಿದೆ. ಇದು ಉಳಿದ 3 ಮೈದಾನಗಳ ಸರಾಸರಿ ಮೊತ್ತಕ್ಕಿಂತ ಸಿಕ್ಕಾಪಟ್ಟೆ ಕಡಿಮೆ ಮೊತ್ತವಾಗಿದೆ.
- ಶಾರ್ದೂಲ್ ಥಾಕೂರ್ ದೇವದತ್ ಪಡಿಕಲ್ ಅವರನ್ನು 4 ಇನ್ನಿಂಗ್ಸ್ ಗಳಲ್ಲಿ 3 ಬಾರಿ ಔಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಥಾಕೂರ್ 19 ಎಸೆತಗಳಲ್ಲಿ ಕೇವಲ 17 ರನ್ ಗಳನ್ನು ಮಾತ್ರ ನೀಡಿದ್ದಾರೆ.
- ಡೆಲ್ಲಿ ಕ್ಯಾಪಿಟಲ್ಸ್ ವೇಗದ ಬೌಲರ್ ಖಲೀಲ್ ಅಹ್ಮದ್ ಈ ಸೀಸನ್ ನಲ್ಲಿ 7.15 ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಇದು ಅವರ 5 ಐಪಿಎಲ್ ಸೀಸನ್ಗಳಲ್ಲಿ ಬೆಸ್ಟ್ ಫರ್ಫಾಮೆನ್ಸ್