ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ಗಂಗೂಲಿ ಕ್ಯಾಪಿಟಲ್ ಫ್ರಾಂಚೈಸಿ, ಮಹಿಳಾ ಲೀಗ್ ತಂಡ, ಪ್ರಿಟೋರಿಯಾ ಕ್ಯಾಪಿಟಲ್ಸ್ ಮತ್ತು ದುಬೈ ಕ್ಯಾಪಿಟಲ್ಸ್ ತಂಡಗಳ ಜವಾಬ್ದಾರಿ ಪಡೆಯಲಿದ್ದಾರೆ.
ಸದ್ಯ ನಡೆಯುತ್ತಿರುವ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಕಾರ್ಯನಿರ್ವಹಿಸುತ್ತಿದ್ದಾರೆ.
2019ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೆಂಟರ್ರಾಗಿ ರಿಕಿ ಪಾಟಿಂಗ್ ಜತೆ ಕಾರ್ಯನಿರ್ವಹಿಸಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ಗೆ ಮರಳಿರುವುದಕ್ಕೆ ಕಾತರನಾಗಿದ್ದೇನೆ.ಕೆಲವು ತಿಂಗಳಿನಿಂದ ಪ್ರಿಟೊರಿಯಾ ಕ್ಯಾಪಟಿಲ್ಸ್ ಮತ್ತು ಮಹಿಳಾ ತಂಡದೊಂದಿಗೆ ಕೆಲಸ ಮಾಡಿದ ಅನುಭವ ಅದ್ಭುತವಗಿತ್ತು.
ಮುಂಬರುವ ಐಪಿಎಲ್ ಅನ್ನು ಎದುರು ನೋಡುತ್ತಿದ್ದೇನೆ. ನನ್ನ ಅವಧಿಯಲ್ಲಿ ಡೆಲ್ಲಿ ಕ್ಯಾಟಪಿಟಲ್ಸ್ ತಂಡ ಅತ್ಯುತ್ತಮ ಪ್ರದರ್ಶನ ನೀಡಿತ್ತು ಎಂದಿದ್ದಾರೆ.