ಐಪಿಎಲ್ 2022 ರಲ್ಲಿ ಮೊದಲ ಕರೋನಾ ವೈರಸ್ ಪ್ರಕರಣ ವರದಿಯಾಗಿದೆ. ಐಪಿಎಲ್ ನೀಡಿದ ಹೇಳಿಕೆಯ ಪ್ರಕಾರ, ದೆಹಲಿ ಕ್ಯಾಪಿಟಲ್ಸ್ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಕೋವಿಡ್ -19 ಪಾಸಿಟಿವ್ ಎಂದು ಕಂಡುಬಂದಿದೆ. ಪಾಸಿಟಿವ್ ಕಂಡುಬಂದ ನಂತರ, ಅವರನ್ನು ಕ್ವಾರಂಟೈನ್ ನಲ್ಲಿ ಇರಿಸಾಲಗಿದೆ. ದೆಹಲಿಯ ವೈದ್ಯಕೀಯ ತಂಡವು ಅವರ ಮೇಲೆ ನಿಗಾ ಇರಿಸಿದೆ.
ಕರೋನಾದಿಂದ ಪಂದ್ಯಾವಳಿಯನ್ನು ಉಳಿಸಲು, ಲೀಗ್ನ ಎಲ್ಲಾ 70 ಪಂದ್ಯಗಳನ್ನು ಮುಂಬೈ ಮತ್ತು ಪುಣೆ ಮೈದಾನದಲ್ಲಿ ಆಡಲಾಗುತ್ತಿದೆ. ಮುಂಬೈನಲ್ಲಿ ಪಂದ್ಯಗಳು ವಾಂಖೆಡೆ, ಬ್ರಬೋರ್ನ್ ಸ್ಟೇಡಿಯಂ ಮತ್ತು ಡಾ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿವೆ. ಇದೇ ಸಮಯದಲ್ಲಿ, ಪುಣೆಯಲ್ಲಿ ಪಂದ್ಯವನ್ನು ಎಂಸಿಎ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಪ್ರಸಕ್ತ ಋತುವಿನಲ್ಲಿ ಮೊದಲ ಕರೋನಾ ಪ್ರಕರಣವು ಕಾಣಿಸಿಕೊಂಡ ನಂತರ, ಬಿಸಿಸಿಐನ ಚಿಂತೆ ಹೆಚ್ಚಿದೆ. ದೆಹಲಿ ತಂಡ ಶನಿವಾರ ತನ್ನ 5ನೇ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಆಡಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಕೊನೆಯ 2 ಸೀಸನ್ಗಳನ್ನು ಯುಎಇಯಲ್ಲಿ ಆಡಲಾಯಿತು. ಕರೋನಾ ವೈರಸ್ನಿಂದಾಗಿ, ಐಪಿಎಲ್ನ ಕೊನೆಯ ಎರಡೂ ಸೀಸನ್ಗಳನ್ನು ಯುಎಇಯಲ್ಲಿ ಆಡಲಾಗಿತ್ತು, ಆದರೆ ಈ ಬಾರಿ ಪಂದ್ಯಾವಳಿಯು ಭಾರತಕ್ಕೆ ಮರಳಿತು. ಕಳೆದ ವರ್ಷವೂ ಭಾರತದಲ್ಲಿ ಐಪಿಎಲ್ ಪಂದ್ಯಗಳನ್ನು ಆಡಲಾಗಿತ್ತು. ಕರೋನಾ ಪ್ರಕರಣವು ಕಾಣಿಸಿಕೊಂಡ ನಂತರ ಐಪಿಎಲ್ 2021 ಅನ್ನು ಮಧ್ಯದಲ್ಲಿ ನಿಲ್ಲಿಸಲಾಯಿತು ಮತ್ತು ಲೀಗ್ನ ಉಳಿದ ಪಂದ್ಯಗಳನ್ನು ಯುಎಇ ಆಯೋಜಿಸಿತ್ತು.