ಭಾರತ-ಪಾಕಿಸ್ತಾನ ನಡುವಿನ ರೋಚಕ ಪಂದ್ಯದಲ್ಲಿ ಡೆಡ್ ಬಾಲ್ ವಿವಾದDಕ್ಕೆ ಸಂಬಂಧಿಸಿದಂತೆ ಆನ್ ಫೀಲ್ಡ್ ಅಂಪೈಯರ್ಗಳು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಅಂಪೈಯರ್ ಸೈಮನ್ ಟೌಫೆಲ್ ಸ್ಪಷ್ಟನೆ ನೀಡಿದ್ದಾರೆ.
ಕೊನೆಯ ಓವರ್ನ ರೋಚಕ ಕದನದಲ್ಲಿ, ಪಾಕ್ ಸ್ಪಿನ್ನರ್ ನವಾಜ್ ಎಸೆದ ನಾಲ್ಕನೆ ಎಸೆತ ನೋ ಬಾಲ್ ಆಗಿತ್ತು. ನಂತರ ಫ್ರೀಹಿಟ್ನಲ್ಲಿ ಕೊಹ್ಲಿ ಬೌಲ್ಡ್ ಆದರು. ಚೆಂಡು ವಿಕೆಟ್ಗೆ ಬಡಿದು ಬೌಂಡರಿ ಲೈನ್ ನತ್ತ ಸಾಗಿತು. ಇದರ ಲಾಭ ಪಡದ ಕೊಹ್ಲಿ ಮತ್ತು ನಾನ್ ಸ್ಟ್ರೈಕರ್ ದಿನೇಶ್ ಕಾರ್ತಿಕ್ 3 ರನ್ ತೆಗೆದರು.
ಇದಕ್ಕೆ ಆಕ್ಷೇಪಿಸಿದ ಪಾಕ್ ನಾಯಕ ಅಂಪೈಯರ್ ಜೊತೆ ಚರ್ಚಿಸಿದರು. ಆನ್ ಫೀಲ್ಡ್ ಅಂಪೈಯರ್ಗಳು 3 ರನ್ಗಳನ್ನು ಬೈಸ್ ಎಂದು ಸಮರ್ಥಿಸಿಕೊಂಡರು.ಪಾಕ್ ಆಟಗಾರರು ಡೆಡ್ ಬಾಲ್ ಎಂದು ವಾದ ಮಾಡಿದರು. ಪಾಕ್ ನಾಯಕನಿಗೂ ಫ್ರೀ ಹಿಟ್ ನಿಯಮದ ಬಗ್ಗೆ ಅರಿವಿದ್ದಂತೆ ಕಾಣಲಿಲ್ಲ.
ಸಿಕ್ಕ ಅವಕಾಶಗಳನ್ನು ಬಳಸಿಕೊಂಡ ವಿರಾಟ್ ಒತ್ತಡವನ್ನು ಕಡಿಮೆ ಮಾಡಿದರು.ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಯಾಯಿತು. ಐಸಿಸಿ ನಿಯಮದ ಪ್ರಕಾರ ಕೊಹ್ಲಿ ಮಾಡಿದ್ದು ಸರಿಯಾಗಿದೆ.
ಏನು ಹೇಳುತ್ತೆ ಐಸಿಸಿ ನಿಯಮ ?
ಒಂದು ಎಸೆತವನ್ನು ಡೆಡ್ ಬಾಲ್ ಎಂದು ಪರಿಗಣಿಸಲು ಒಂದೋ ಚೆಂಡು ಬೌಲರ್ ಕೈಸೇರಬೇಕು ಇಲ್ಲ ವಿಕೆಟ್ ಕೀಪರ್ ಕೈಸೇರಿಬೇಕು. ಅಥವಾ ಬೌಂಡರಿ ಗೆರೆ ದಾಟಿರಬೇಕು ಇಲ್ಲ ವಿಕೆಟ್ ಪತನವಾಗಿರಬೇಕು.
ಫ್ರೀ ಹಿಟ್ನಲ್ಲಿ ನಾಲ್ಕು ರೀತಿಯಲ್ಲಿ ಬ್ಯಾಟರ್ ಔಟಾಗಬಹುದು. ಚೆಂಡನ್ನು ಉದ್ದೇಶಪೂರ್ವಕವಾಗಿ ಮುಟ್ಟಿದ್ದಲ್ಲಿ. ಕೈಯಲ್ಲಿ ಮುಟ್ಟುವುದು,ರನೌಟ್, ಎರಡು ಬಾರಿ ಬ್ಯಾಟ್ಗೆ ಚೆಂಡು ತಗುಲಿದರೆ ಮತ್ತು ಕ್ಷೇತ್ರ ರಕ್ಷಣೆಗೆ ಅಡಚಣೆ ಮಾಡಿದಾಗ ಔಟೆಂದು ಪರಿಗಣಿಸಲಾಗುತ್ತದೆ.
ಫ್ರೀ ಹಿಟ್ನಲ್ಲಿ ಬ್ಯಾಟರ್ ಔಟಾದರೆ ಅದನ್ನು ಔಟೆಂದು ಪರಿಗಣಿಸುವುದಿಲ್ಲ. ಚೆಂಡು ವಿಕೆಟ್ಗೆ ಬಡಿದರೂ ಓಡಬಹುದು. ಒಂದು ವೇಳೆ ಚೆಂಡು ಬ್ಯಾಟ್ಗೆ ಬಡಿದು ನಂತರ ವಿಕೆಟ್ಗೆ ಬಡಿದರೆ ರನ್ ಬ್ಯಾಟರ್ಗೆ ಸೇರುತ್ತದೆ.
ಚೆಂಡು ಪ್ಯಾಡ್ಗೆ ತಗುಲಿ ವಿಕೆಟ್ಗೆ ಬಡಿದರೆ ಲೆಗ್ ಬೈ ಎಂದು ಪರಿಗಣಿಸಲಾಗುತ್ತದೆ.ಮೊನ್ನೆ ಫ್ರೀ ಹಿಟ್ನಲ್ಲಿ ವಿರಾಟ್ ನಂತೆ ಕ್ಲೀನ್ ಬೌಲ್ಡ್ ಆಗಿ ಓಡಿದರೆ ಆದರೆ ಅದು ಬೈಸ್ ಎಂದು ಪರಿಗಣಿಸಲಾಗುತ್ತದೆ.