ದುಬೈ ಓಪನ್ನ ಕ್ವಾರ್ಟರ್ ಫೈನಲ್ನಲ್ಲಿ ಸರ್ಬಿಯಾದ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಕ್ ಅವರನ್ನು 4-6 6-7 (4-7) ಸೆಟ್ಗಳಿಂದ ವಿಶ್ವದ 123ನೇ ಶ್ರೇಯಾಂಕದ ಜಿರಿ ವೆಸೆಲಿ ಸೋಲಿಸಿದರು. ಈ ಸೋಲಿನಿಂದಾಗಿ ಜೊಕೊವಿಕ್ ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ಪಟ್ಟವನ್ನು ಬಿಟ್ಟಿದ್ದಾರೆ. ಈಗ ಅವರ ಸ್ಥಾನಕ್ಕೆ ರಷ್ಯಾದ ಡೇನಿಯಲ್ ಮೆಡ್ವೆಡೆವ್ ಬರಲಿದ್ದಾರೆ. ಜೊಕೊವಿಕ್ ಸೋಲು ಮೆಡ್ವೆಡೆವ್ ಗೆ ಲಾಭ ತಂದಿದೆ.
ಫೆಬ್ರವರಿ 28 ರಂದು ಹೊಸ ಎಟಿಪಿ ಶ್ರೇಯಾಂಕಗಳನ್ನು ಬಿಡುಗಡೆ ಆದಾಗ, ಮೆಡ್ವೆಡೆವ್ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯುತ್ತಾರೆ. ಜೊಕೊವಿಕ್ 2020ರ ನಂತರ ಮೊದಲ ಬಾರಿಗೆ ಎಟಿಪಿ ಶ್ರೇಯಾಂಕದಲ್ಲಿ ಮೊದಲ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅವರು ಸುಮಾರು 361 ವಾರಗಳ ಕಾಲ ವಿಶ್ವದ ನಂಬರ್ ಒನ್ ಸ್ಥಾನದಲ್ಲಿದ್ದರು.
ಮೆಡ್ವೆಡೆವ್ ನಂಬರ್ ಒನ್ ಆಗುವುದರೊಂದಿಗೆ, ಫೆಬ್ರುವರಿ 2, ರಿಂದ ಪುರುಷರ ಟೆನಿಸ್ ಶ್ರೇಯಾಂಕದಲ್ಲಿ ಇನ್ನೊಬ್ಬ ಆಟಗಾರ ‘ಬಿಗ್ ಫೋರ್’ ಅನ್ನು ಬದಲಾಯಿಸಿದ್ದಾರೆ. ರೋಜರ್ ಫೆಡರರ್, ರಾಫೆಲ್ ನಡಾಲ್, ಆಂಡಿ ಮರ್ರೆ ಮತ್ತು ನೊವಾಕ್ ಜೊಕೊವಿಕ್ ಇಷ್ಟು ದಿನ ಬಿಗ್ ಫೋರ್ನಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಈಗ ಈ ನಾಲ್ವರನ್ನು ಹೊರತುಪಡಿಸಿ, ಹೊಸ ಮುಖವು ವಿಶ್ವ ಶ್ರೇಯಾಂಕದ ದೊಡ್ಡ ಮುಖವಾಗಿದೆ. ಮೆಡ್ವೆಡೆವ್ ಕಳೆದ ವರ್ಷ ಯುಎಸ್ ಓಪನ್ ಫೈನಲ್ನಲ್ಲಿ ಜೊಕೊವಿಕ್ ಅವರನ್ನು ಸೋಲಿಸುವ ಮೂಲಕ ತಮ್ಮ ಮೊದಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದರು.
ಜೊಕೊವಿಕ್ ಇದುವರೆಗೆ 20 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ವರ್ಷದ ಆಸ್ಟ್ರೇಲಿಯನ್ ಓಪನ್ಗೆ ಮೊದಲು, ಅವರು ರಾಫೆಲ್ ನಡಾಲ್ ಮತ್ತು ರೋಜರ್ ಫೆಡರರ್ ಅವರೊಂದಿಗೆ ಅತಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ಗಳನ್ನು ಗೆದ್ದ ವಿಷಯದಲ್ಲಿ ಅಗ್ರಸ್ಥಾನದಲ್ಲಿದ್ದರು. ಇದೀಗ ರಾಫೆಲ್ ನಡಾಲ್ 21 ಗ್ರ್ಯಾಂಡ್ ಸ್ಲಾಮ್ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.