ಕೋಲ್ಕತ್ತಾ ನೈಟ್ ರೈಡರ್ಸ್ ಚೆನ್ನೈ ವಿರುದ್ಧ 6 ವಿಕೆಟ್ಗಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಪ್ಗೆ ಹೋಗಲು ಇನ್ನು ಕಾಯಬೇಕಿದೆ.
ಚೆಪಾಕ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿದೆ. ಕೋಲ್ಕತ್ತಾ ತಂಡ 18.3 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್ ಕಲೆ ಹಾಕಿತು.
145 ರನ್ ಗುರಿ ಬೆನ್ನತ್ತಿದ ಕೋಲ್ಕತ್ತಾ ತಂಡ ಆರಂಭದಲ್ಲೆ ದೀಪಕ್ ಚಾಹರ್ ದಾಳಿಗೆ ತತ್ತರಿಸಿತು. ಜಾಸನ್ ರಾಯ್ 12, ರೆಹಮಾನ್ ಹುಲ್ಲಾ ಗುರ್ಬಾಜ್ 1, ವೆಂಕಟೇಶ್ ಅಯ್ಯರ್ 9, ನಾಯಕ ನಿತೀಶ್ ರಾಣಾ ಅಜೇಯ 57 ರನ್ ಹಾಗೂ ರಿಂಕು ಸಿಂಗ್ 54 ರನ್ ಹೊಡೆದು ತಂಡವನ್ನು ಗೆಲುವಿನ ದಡ ಸೇರಿಸಿದರು.
ಚೆನ್ನೈ ಪರ ದೀಪಕ್ ಚಾಹರ್ 3 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಚೆನ್ನೈ ಪರ ಋತುರಾಜ್ ಗಾಯಕ್ವಾಡ್ 17,ಡೆವೊನ್ ಕಾನ್ವೆ 30, ರಹಾನೆ 16, ಶಿವಂ ದುಬೆ 48, ಜಡೇಜಾ 20 ರನ್ ಹೊಡೆದರು. ವರಣ್ ಚಕ್ರವರ್ತಿ ಹಾಗೂ ಸುನಿಲ್ ತಲಾ 2 ವಿಕೆಟ್ ಪಡೆದರು.