ಐಪಿಎಲ್ ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ ಮೀಸಲು ದಿನವಾದ ಇಂದು ನಡೆಯಲಿದೆ.
ಅಹಮದಾಬಾದ್ ನ ನರೇಂದ್ರ ಮೋದಿ ಮೈದಾನದಲ್ಲಿ ಭಾನುವಾರ ನಡೆಯಬೇಕಿದ್ದ ಚೆನ್ನೈ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ ಆರಂಭಕ್ಕೂ ಮುನ್ನವೇ ಮಳೆ ಸುರಿಯಿತು. ಮೈದಾನದ ಸಿಬ್ಬಂದಿಗಳು ಮೈದಾನದಲ್ಲಿ ನೀರನ್ನು ಹೊರಹಾಕಿದರು.
9 ಗಂಟೆ ವೇಳೆಗೆ ಮಳೆ ನಿಂತು ಹೋಗಿತ್ತು. ಪಿಚ್ ಮೇಲಿನ ಹೊದಿಕೆಯನ್ನು ತೆಗೆಯಲಾಗಿತ್ತು. ಇನ್ನೇನು ಪಮದ್ಯ ಆರಂಭವಾಗುತ್ತೆ ಎನ್ನುವಾಗ 9.23ಕ್ಕೆ ಮತ್ತೆ ಜೋರಾಗಿ ಮಳೆ ಸುರಿಯಿತು.9.40ರೊಳಗೆ ಪಂದ್ಯ ಆರಂಭವಾಗಿದ್ದರೆ ಓವರ್ಗಳ ಕಡಿತವಾಗುತ್ತಿರಲಿಲ್ಲ. ಮಳೆಗೆ ಇಡೀ ಮೈದಾನ ಕೆರೆಯಂತಾಗಿತ್ತು.
ನಿಯಮಗಳ ಪ್ರಕಾರ ಮಳೆಗೆ ಪಂದ್ಯ ಆಹುತಿಯಾದರೆ ಅಥವಾ ಪಂದ್ಯವನ್ನು ಮೀಸಲು ದಿನ ಆಡಿಸಬಹುದಾಗಿದೆ.ಒಂದು ವೇಳೆ ಮೀಸಲು ದಿನ ಕೂಡ ಮಳೆ ಬಂದರೆ ಲೀಗ್ನಲ್ಲಿ ಯಾವ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿತ್ತೊ ಆ ತಂಡ ಚಾಂಪಿಯನ್ ಆಗಲಿದೆ.
ಗುಜರಾತ್ ತಂಡ 70 ಪಂದ್ಯಗಳಿಂದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿತ್ತು.14 ಪಂದ್ಯಗಳಿಂದ 10ನ್ನು ಗೆದ್ದು 20 ಅಂಕ ಪಡೆದಿತ್ತು.ಚೆನ್ನೈ ತಂಡ 17 ಅಂಕ ಪಡೆದಿತ್ತು.