Saturday, September 30, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

CSKvsGT ಇಂದು ಚೆನ್ನೈ, ಗುಜರಾತ್ ಫೈನಲ್ ಕದನ   

CSKvsGT ಇಂದು ಚೆನ್ನೈ, ಗುಜರಾತ್ ಫೈನಲ್ ಕದನ   

May 28, 2023
in Cricket, ಕ್ರಿಕೆಟ್
CSKvsGT ಇಂದು ಚೆನ್ನೈ, ಗುಜರಾತ್ ಫೈನಲ್ ಕದನ   

Ahmedabad: Chennai Super Kings players during a practice session ahead of the IPL 2023 final cricket, at the Narendra Modi Stadium in Ahmedabad, Saturday, May 27, 2023. (PTI Photo/Kunal Patil) (PTI05_27_2023_000234B)

Share on FacebookShare on TwitterShare on WhatsAppShare on Telegram

 

16ನೇ ಆವೃತ್ತಿಯ ಐಪಿಎಲ್ ರೋಚಕ ಘಟ್ಟ ತಲುಪಿದ್ದು  ಇಂದು ನಾಲ್ಕು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದು ಫೈನಲ್‍ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

ಇಲ್ಲಿನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ತಂಡ ಐದನೆ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟರೆ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಸತತ ಎರಡೆನೆ ಪ್ರಶಸ್ತಿ ಮೇಲೆ ಕಣ್ಣಟ್ಟಿದೆ.

ನರೇಂದ್ರ ಮೋದಿ ಮೈದಾನದಲ್ಲಿ  1,32,000 ಮಂದಿ ಅಂತಿಮ ಕದನವನ್ನು ವೀಕ್ಷಿಸಲಿದ್ದಾರೆ. ಶೀಘದಲ್ಲೆ 42ನೇ ಹುಟ್ಟುಹಬ್ಬ  ಆಚರಿಸುತ್ತಿರುವ ಧೋನಿ ಐಪಿಎಲ್‍ನಲ್ಲಿ ಕೊನೆಯ ಸವಾಲನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಐದನೆ ಪ್ರಶಸ್ತಿ ಗೆದ್ದುಕೊಡಲು ಕಾತರರಾಗಿದ್ದಾರೆ.

ಮೊಟೆರೊ ಅಂಗಳದಲ್ಲಿ 3 ಶತಕ ಮತ್ತು 851 ರನ್ ಈ ಬಾರಿಯ ಐಪಿಎಲ್‍ನಲ್ಲಿ  ರನ್ ಹರಿದು ಬಂದಿದೆ.  ಧೋನಿ ಅವರ ಪ್ಲ್ಯಾನ್ ಏನು ಅನ್ನೋದು  ತುಂಬ ಕುತೂಹಲಕಾರಿಯಾಗಿದೆ.

ದಿಪಕ್ ಚಾಹರ್ ಅವರ ಸ್ವಿಂಗ್ ಅಥವಾ ರವೀಂದ್ರ ಜಡೇಜಾ ಹಾಗೂ ಮೋಯಿನ್ ಅಲಿ ಅವರ ಸ್ಪಿನ್ ಜಾದೂ ನಡೆಯುತ್ತಾ ಅನ್ನೋದು ಕುತುಹಲಕಾರಿಯಾಗಿದೆ. ತಾಂತ್ರಿಕತೆ ಹೊಂದಿರುವ ಬ್ಯಾಟರ್ ರನ್ ಮಳೆ ಸುರಿಸುತ್ತಾರೆ.

ಧೋನಿ ಮುಂದಿನ ಆವೃತ್ತಿಯಲ್ಲಿ ಆಡಲಿ ಅನ್ನೋದು ಅಭಿಮಾನಿಗಳ ಆಸೆಯಾಗಿದೆ ಆದರೆ ಇಡೀ ಟೂರ್ನಿ ಆಡಿದ ಧೋನಿ ಗಾಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮೊಣಕಾಲು ನೋವು ಆಡದಂತೆ ತಡೆಯೊಡ್ಡುತ್ತಿದೆ. ಧೋನಿ ಎಂಟನೆ ಕ್ರಮಾಂಕದಲ್ಲಿ  ಬ್ಯಾಟಿಂಗ್ ಮಾಡುತ್ತಿದ್ದಾರೆ.

ಸಿಕ್ಸರ್‍ಗಳ ಸುರಿಮಳೆಗೈಯುವ ಶಿವಂ ದುಬೆ  ಅಸ್ಥಿರತೆ  ಹೊಂದಿದ್ದಾರೆ. ರವೀಂದ್ರ ಜಡೇಜಾ ಕೂಡ ಬೌಲಿಂಗ್‍ನಲ್ಲಿ  ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ.  ಧೋನಿ ನಿವೃತ್ತಿ ಹೊಂದುತ್ತಿದ್ದು ಭವಿಷ್ಯದ ದೃಷ್ಟಿಯಿಂದ ತಂಡಕ್ಕೆ ನಾಯಕ ಬೇಕಾಗಿದ್ದಾರೆ.

ಕೊನೆಯ ಪಂದ್ಯವನ್ನು ಆಡುತ್ತರಿರುವ ಧೋನಿಗೆ ಗುಜರಾತ್ ಟೈಟಾನ್ಸ್ ಎದುರಾಳಿಯಾಗಿದೆ.

73 ಪಂದ್ಯಗಳ ಬಳಿಕ ಐಪಿಎಲ್‍ನ ಎರಡು ಬಲಿಷ್ಠ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡ ಕೂಡ  ವೇಗವಾಗಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ.

ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಿದ ರೀತಿ ಅತ್ಯದ್ಭುತ. ನಾಯಕತ್ವಕ್ಕೆ ಹೊರ ಆಯಾಮ ನೀಡಿದ್ದಾರೆ. ಧೋನಿ ರೀತಿಯಲ್ಲೆ ನಾಯಕತ್ವವನ್ನು ಮುನ್ನಡೆಸಿ ಯಶಸ್ಸು ಕಂಡಿದ್ದಾರೆ.

ಬ್ಯಾಟರ್‍ಗಳು ಗೆಲ್ಲಿಸುತ್ತಾರೆ ಅನ್ನೋದು ಹಳೆ ಮಾತಾಗಿದೆ.  ಆದರೆ ಗುಜರಾತ್ ಟೈಟಾನ್ಸ್ ಈ ಮಾತನ್ನು ಸುಳ್ಳಾಗಿಸಿದೆ.  ಮೊಹ್ಮದ್ ಶಮಿ  (28 ವಿಕೆಟ್), ರಶೀದ್ ಖಾನ್ (27 ವಿಕೆಟ್), ಮೋಹಿತ್ ಶರ್ಮಾ (24 ವಿಕೆಟ್) ಮಿಂಚಿದ್ದಾರೆ. ಆದರೆ ತಂಡದ ಯಶಸ್ಸಿನಲ್ಲಿ  ಓಪನರ್ ಶುಭಮನ್ ಗಿಲ್ ಮಹತ್ವದ ಪಾತ್ರ ಟೂರ್ನಿಯಲ್ಲಿ 851 ರನ್ ಹೊಡೆದು ಅಬ್ಬರಿಸಿದ್ದಾರೆ, ನಾಯಕ ಹಾರ್ದಿಕ್ ಪಾಂಡ್ಯ 325 ರನ್ ಹೊಡೆದಿದ್ದಾರೆ.

ವೃದ್ದಿಮಾನ್ ಸಾಹಾ ವೈಫಲ್ಯ ಹೆಚ್ಚು ಕಂಡಿದ್ದಾರೆ. 127 ಸ್ಟ್ರೈಕ್ ರೇಟ್ ಹೊಂದಿದ ಹೊರತಾಗಿಯೂ  ತಂಡ ಇವರನ್ನು ಆಡುವ ಹನ್ನೊಂದರಿಂದ ಕೈಬಿಟ್ಟಿಲ್ಲ.

ಇಂದಿನ ಪಂದ್ಯದಲ್ಲಿ ಶುಭಮನ್ ಗಿಲ್ ಅವರನ್ನು ಬೇಗನೆ ಔಟ್ ಮಾಡಲು ಧೋನಿ ಪ್ರಯತ್ನಿಸುತ್ತಾರೆ.  ಶುಭಮನ್ ಗಿಲ್‍ರಂತೆ ಯಾವ ಬ್ಯಾಟರ್‍ಗಳು ಪ್ರತಿರೋಧ ತೋರಿಲ್ಲ.

ಅಜಿಂಕ್ಯ ರಹಾನೆ (299 ರನ್, 13 ಪಂದ್ಯ), ಶಿವಂ ದುಬೆ ಈ ಆವೃತ್ತಿಯಲ್ಲಿ ಅಬ್ಬರಿಸಿದ್ದಾರೆ.  ಮಥೀಶ ಪತಿರನ (17 ವಿಕೆಟ್, 15 ಪಂದ್ಯ), ತುಷಾರ್ ದೇಶಪಾಂಡೆ (21 ವಿಕೆಟ್, 15 ಪಂದ್ಯ) ಮಿಂಚಿದ್ದಾರೆ.

ಚೆನ್ನೈ ಬ್ಯಾಟರ್ ಡೆವೊನ್ ಕಾನ್ವೆ (625 ರನ್, 15 ಪಂದ್ಯ, 6 ಅರ್ಧ ಶತಕ,  ಋತುರಾಜ್ ಗಾಯಕ್ವಾಡ್ (564 ರನ್, 15 ಪಂದ್ಯ, 4 ಅರ್ಧ ಶತಕ) ಒಳ್ಳೆಯ ಆರಂಭ ನೀಡ್ತುತಾ ಬಂದಿದ್ದಾರೆ.

ದುಬೆ (386 ರನ್, 15 ಪಂದ್ಯ, 3 ಅರ್ಧ  ಶತಕ) 33 ಸಿಕ್ಸರ್ ಸಿಡಿಸಿದ್ದಾರೆ. ಶುಭಮನ್ ಗಿಲ್ ಕೂಡ 33 ಸಿಕ್ಸರ್ ಹೊಡೆದಿದ್ದಾರೆ.

ಇಂದಿನ ಪಂದ್ಯವನ್ನು ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟವಾಗಿದೆ.

 

 

 

 

 

87e82548686c167ccac8307d65f493ce?s=150&d=mm&r=g

chandrappam

See author's posts

Tags: Chennai Super KingsCSKvsGTDhoniGujarat TitansHardik PandyaIPL Season 16Match PreviewSports Karnataka
ShareTweetSendShare
Next Post
Malaysia Masters ಫೈನಲ್‍ಗೆ ಪ್ರಣಯ್, ಸಿಂಧುಗೆ ಮತ್ತೆ ನಿರಾಸೆ

Malaysia Masters ಫೈನಲ್‍ಗೆ ಪ್ರಣಯ್, ಸಿಂಧುಗೆ ಮತ್ತೆ ನಿರಾಸೆ

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಬ್ಯಾಟಿಂಗ್‌ ಲಯ ಕಂಡ ಶ್ರೇಯಸ್‌: ಆಸೀಸ್‌ ವಿರುದ್ಧ ಶತಕ ದಾಖಲು

CWC 2023: ಚೊಚ್ಚಲ ವಿಶ್ವಕಪ್‌ನಲ್ಲಿ ಮಿಂಚಲು ಭಾರತದ ಯುವ ಪಡೆ ಸಜ್ಜು

September 30, 2023
CWC 2023: ಇಂದು ಭಾರತ v ಇಂಗ್ಲೆಂಡ್‌ ಅಭ್ಯಾಸ ಪಂದ್ಯ: ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ

CWC 2023: ಇಂದು ಭಾರತ v ಇಂಗ್ಲೆಂಡ್‌ ಅಭ್ಯಾಸ ಪಂದ್ಯ: ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ

September 30, 2023
CWC 2023: ಗಾಯದ ಸಮಸ್ಯೆ ಬಳಿಕ ಸ್ಟ್ರಾಂಗ್‌ ಕಮ್‌ಬ್ಯಾಕ್‌: ಅರ್ಧಶತಕ ಸಿಡಿಸಿದ ಕೇನ್‌

CWC 2023: ಗಾಯದ ಸಮಸ್ಯೆ ಬಳಿಕ ಸ್ಟ್ರಾಂಗ್‌ ಕಮ್‌ಬ್ಯಾಕ್‌: ಅರ್ಧಶತಕ ಸಿಡಿಸಿದ ಕೇನ್‌

September 30, 2023
CWC 2023: ವಿಶ್ವಕಪ್‌ ಆರಂಭಕ್ಕೆ ದಿನಗಣನೆ: ನಾಳೆಯಿಂದ ಅಭ್ಯಾಸ ಪಂದ್ಯ ಶುರು

CWC 2023: ODI ವಿಶ್ವಕಪ್‌ನಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡ ಸ್ಟಾರ್‌ ಪ್ಲೇಯರ್ಸ್‌

September 29, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram