cricket news Team india – ರೋಹಿತ್ ಶರ್ಮಾ ಫಿಟ್ – ವೆಸ್ಟ್ ಇಂಡಿಸ್ ಸರಣಿಗೆ ಲಭ್ಯ…!
ದಕ್ಷಿಣ ಆಫ್ರಿಕಾ ವಿರುದ್ದ ಸರಣಿ ಸೋತು ಮುಖಭಂಗ ಅನುಭವಿಸಿರುವ ಟೀಮ್ ಇಂಡಿಯಾಗೆ ಇದೀಗ ಗುಡ್ ನ್ಯೂಸ್ ಬಂದಿದೆ.
ಟೀಮ್ ಇಂಡಿಯಾದ ಏಕದಿನ ಮತ್ತು ಟಿ-20 ತಂಡದ ನಾಯಕ ರೋಹಿತ್ ಶರ್ಮಾ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ಫಿಟ್ ಆಗಿದ್ದಾರೆ
ಅಲ್ಲದೆ ಫೆಬ್ರವರಿ 6ರಿಂದ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ದದ ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮಾ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
ಗಾಯದಿಂದಾಗಿ ರೋಹಿತ್ ಶರ್ಮಾ ಅವರು ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಬಳಿಕ ಎನ್ ಸಿಎ ನಲ್ಲಿ ಚಿಕಿತ್ಸೆ ಪಡೆದು ಇದೀಗ ಫಿಟ್ ಆಂಡ್ ಫೈನ್ ಆಗಿದ್ದಾರೆ.
cricketnews team india – Rohit fit to lead India against Windies
ರೋಹಿತ್ ಶರ್ಮಾ ಫಿಟ್ ಆಗಿದ್ದಾರೆ. ವೆಸ್ಟ್ ಇಂಡೀಸ್ ಸರಣಿಗೆ ಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.
ಈಗಾಗಲೇ ಏಳು ವಾರಗಳ ಕಾಲ ಎನ್ ಸಿಎ ನಲ್ಲಿ ಚಿಕಿತ್ಸೆ ಪಡೆದಿರುವ ರೋಹಿತ್ ಶರ್ಮಾ ಅವರು ಮುಂಬೈ ನಲ್ಲಿ ತರಬೇತಿ ನಡೆಸುತ್ತಿದ್ದಾರೆ. ಸದ್ಯದಲ್ಲೇ ಬೆಂಗಳೂರಿಗೆ ಆಗಮಿಸಲಿದ್ದು, ಫಿಟ್ ನೆಸ್ ಟೆಸ್ಟ್ ಗೆ ಒಳಪಡಲಿದ್ದಾರೆ. ಬಳಿಕ ಎನ್ ಸಿಎ ಫಿಟ್ ನೆಸ್ ಸರ್ಟಿಫಿಕೇಟ್ ಪಡೆದುಕೊಳ್ಳಲಿದ್ದಾರೆ.
ಇನ್ನು ವೆಸ್ಟ್ ಇಂಡೀಸ್ ಸರಣಿಗೆ ತಂಡವನ್ನು ಆಯ್ಕೆ ಸಮಿತಿಯು ಈ ವಾರ ಆಯ್ಕೆ ಮಾಡಲಿದೆ. ವೆಸ್ಟ್ ಇಂಡಿಸ್ ಸರಣಿಗೆ ತಂಡದ ಕೆಲವು ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ. ಹಾಗೇ 2022 ಮತ್ತು 2023ರಲ್ಲಿ ಎರಡು ವಿಶ್ವಕಪ್ ಟೂರ್ನಿಗಳನ್ನು ಆಡುತ್ತಿರುವುದರಿಂದ ತಂಡವನ್ನು ಕಟ್ಟಲು ಆಯ್ಕೆ ಸಮಿತಿಯು ಪ್ಲಾನ್ ಕೂಡ ಮಾಡಲಿದೆ