Cricketer Arrest ಅತ್ಯಾಚಾರ ಆರೋಪ ಸಂಬಂಧ ಶ್ರೀಲಂಕಾ ಕ್ರಿಕೆಟಿಗ ಧನುಷ್ಕಾ ಗುಣತಿಲಕ ಅವರನ್ನು ಆಸ್ಟ್ರೇಲಿಯಾ ಪೊಲೀಸರು ಬಂಧಿಸಿದ್ದಾರೆ.
ನ,2ರಂದು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿ ಸಿಡ್ನಿ ನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಳೆದ ವಾರ ರೋಸ್ ಬೇ ನಿವಾಸಿ 29 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಧನುಷ್ಕಾ ಗುಣತಿಲಕ ಮಹಿಳೆ ಮೇಲೆ ಅತ್ಯಾಚಾರ ಮಾಡಿರುವ ಹಿನ್ನೆಲೆಯಲ್ಲಿ
ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಶ್ರೀಲಂಕಾ ತಂಡ ಗುಣತಿಲಕನನ್ನು ಬಿಟ್ಟು ತವರಿಗೆ ಮರಳಿಗೆ ಎಂದು ಮೂಲಗಳು ತಿಳಿಸಿವೆ.
ಭಾನುವಾರ ಶ್ರೀಲಂಕಾ ತಂಡ ಇಂಗ್ಲೆಂಡ್ ವಿರುದ್ಧ 4 ವಿಕೆಟ್ಗಳ ಅಂತರದಿಂದ ಸೋತು ಟೂರ್ನಿಯಿಂದ ಹೊರ ಬಿತ್ತು.
ಎಡಗೈ ಬ್ಯಾಟರ್ ಗುಣತಿಲಕ ನಮೀಬಿಯಾ ವಿರುದ್ಧ ಡಕೌಟ್ ಆಗಿದ್ದರು.ನಂತರ ಗಾಯದ ಸಮಸ್ಯೆಯಿಂದಾಗಿ ಆಡುವ ಹನ್ನೊಮದರ ಬಳಗದಿಂದ ಹೊರ ನಡೆದಿದ್ದರು. ಈ ಕುರಿತು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮಾಹಿತಿ ನೀಡಬೇಕಿದೆ.
ನ್ಯೂ ಸೌತ್ ವೇಲ್ ಪೊಲೀಸರು ವೆಬ್ ಸೈಟ್ನಲ್ಲಿ ಹೆಸರು ಹೇಳದೆ ಲಂಕಾ ಕ್ರಿಕೆಟಿಗ ಎಂದು ವೆಬ್ ಸೈಟ್ನಲ್ಲಿ ಬರೆದಿದ್ದಾರೆ.