ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಮತ್ತು ಭಾರತ ತಂಡದ ಉಪನಾಯಕ ಕೆಎಲ್ ರಾಹುಲ್ ಕಳೆದ 3 ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ ಇವರಿಬ್ಬರೂ ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ತೆಗೆದುಕೊಂಡಿದ್ದಾರೆ. ಈ ವರ್ಷಾಂತ್ಯಕ್ಕೆ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವರದಿಗಳು ಇತ್ತೀಚೆಗೆ ಬಂದಿದ್ದವು.
ಮಾಧ್ಯಮ ವರದಿಗಳ ಪ್ರಕಾರ, ಅಥಿಯಾ ಮತ್ತು ಕೆಎಲ್ ರಾಹುಲ್ ಮುಂಬೈನ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ಅಪಾರ್ಟ್ಮೆಂಟ್ ತೆಗೆದುಕೊಂಡಿದ್ದಾರೆ. ಇದು ಸಮುದ್ರ ತಿರದಲ್ಲಿರುವ 4BHK ಅಪಾರ್ಟ್ಮೆಂಟ್ ಆಗಿದೆ. ಕಟ್ಟಡದ 8ನೇ ಮಹಡಿಯಲ್ಲಿ ಇವರು 10 ಲಕ್ಷ ರೂ. ಬಾಡಿಗೆ ಮನೆ ಮಾಡಿದ್ದಾರೆ. ಅವರ ಆಪ್ತರು ಕೂಡ ಇದನ್ನು ದಂಪತಿಗಳ ಕನಸಿನ ಮನೆ ಎಂದು ಬಣ್ಣಿಸಿದ್ದಾರೆ. ಮದುವೆಯ ನಂತರ ಇದೇ ಮನೆಯಲ್ಲಿ ಇವರು ವಾಸಿಸಲಿದ್ದಾರೆ.
ರಾಹುಲ್ ಮತ್ತು ಅಥಿಯಾ ಅವರ ಸಂಬಂಧದ ಸುದ್ದಿಯ ನಂತರ, ಕೆಎಲ್ ರಾಹುಲ್ ಅವರು ಸುನೀಲ್ ಶೆಟ್ಟಿ ಅವರ ಕುಟುಂಬದೊಂದಿಗೆ ಹಲವಾರು ಬಾರಿ ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಥಿಯಾ ಅವರ ಸಹೋದರ ಅಹಾನ್ ಅವರ ಚೊಚ್ಚಲ ಚಿತ್ರ ತಡಪ್ನ ಚಿತ್ರ ಪ್ರದರ್ಶನದ ಸಮಯದಲ್ಲಿ ಇಬ್ಬರ ಕುಟಂಬಸ್ಥರು ಇದ್ದರು. ಇಬ್ಬರ ಸಂಬಂಧವನ್ನು ಕುಟುಂಬದವರು ಅನುಮೋದಿಸಿದ್ದಾರೆ.
ಸುನೀಲ್ ಶೆಟ್ಟಿ ರಾಹುಲ್ ಅವರ ಇನ್ನಿಂಗ್ಸ್ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ. ಸುನಿಲ್, ರಾಹುಲ್ ಅವರನ್ನು ಬಾಬಾ ಎಂದು ಕರೆಯುತ್ತಾರೆ. ಆಗಸ್ಟ್ 2021 ರಂದು ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಅಥಿಯಾ ಟೀಮ್ ಇಂಡಿಯಾ ಜೊತೆಗಿದ್ದರು. ಆಗಸ್ಟ್ 12 ರಂದು ರಾಹುಲ್ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸುವ ಒಂದು ದಿನ ಮೊದಲು ಸುನಿಲ್ ಶೆಟ್ಟಿ ಅವರ ಜನ್ಮದಿನವಾಗಿತ್ತು. ರಾಹುಲ್ ಅವರ ಈ ಶತಕವನ್ನು ಹುಟ್ಟುಹಬ್ಬದ ಉಡುಗೊರೆಯಾಗಿ ಸುನಿಲ್ ಶೆಟ್ಟಿ ಹೇಳಿದ್ದರು.
ಕನ್ನಡಕ ಬ್ರಾಂಡ್ ಜಾಹೀರಾತಿನಲ್ಲಿ ಸ್ಟಾರ್ಸ್
ಅಥಿಯಾ ಮತ್ತು ರಾಹುಲ್ ತಮ್ಮ ಸಂಬಂಧದ ಬಗ್ಗೆ ಯಾವಾಗಲೂ ಓಪನ್. ಇತ್ತೀಚೆಗಷ್ಟೇ ಇವರಿಬ್ಬರೂ ಕನ್ನಡಕ ಬ್ರಾಂಡ್ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಮದುವೆಯ ಸಂಭ್ರಮವನ್ನು ಅಭಿಮಾನಿಗಳಲ್ಲಿ ಹೆಚ್ಚಿಸಿದೆ. ಆದಾಗ್ಯೂ, ಇಬ್ಬರ ಕುಟುಂಬದಿಂದ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಲಾಗಿಲ್ಲ.