ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಸೋಮವಾರ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ಭೇಟಿ ನೀಡಿದರು. ಈ ವೇಳೆ ಛೆಟ್ರಿ ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಭೇಟಿಯಾದರು. ಒಟ್ಟಿಗೆ ಅವರು ಈಶಾನ್ಯ ಮತ್ತು ಪ್ಲೇಟ್ ಗ್ರೂಪ್ ಆಟಗಾರರೊಂದಿಗೆ ಮಾತನಾಡಿದರು. ಬಿಸಿಸಿಐ ಚಿತ್ರ ಹಾಗೂ ವಿಡಿಯೋವನ್ನು ಟ್ವೀಟ್ ಮಾಡಿದೆ. ವಿಡಿಯೋದಲ್ಲಿ ಛೆಟ್ರಿ ಫೀಲ್ಡಿಂಗ್ ಮಾಡುತ್ತಿರುವುದನ್ನು ಕಾಣಬಹುದು.
🎥 NCA's Neighbour, Indian Football Captain and Legend, @chetrisunil11 dropping by on Sunday evening. 👏 👏
He had a delightful fielding competition and shared some learnings from his own incredible journey in Football with the boys from North East and Plate Teams. 👍 👍 pic.twitter.com/1O1Gx7F12K
— BCCI (@BCCI) May 9, 2022
ಸುನಿಲ್ ಛೆಟ್ರಿ ಫೀಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಭಾರತ ಫುಟ್ಬಾಲ್ ತಂಡದ ನಾಯಕ ತಮ್ಮ ಅನುಭವಗಳನ್ನು ಆಟಗಾರರೊಂದಿಗೆ ಹಂಚಿಕೊಂಡರು. ಬಿಸಿಸಿಐ ಟ್ವೀಟ್ ಮಾಡಿದ್ದು, “ನೆರೆಯ ಎನ್‌ಸಿಎಯ, ನೆರೆಯ ಭಾರತೀಯ ಫುಟ್‌ಬಾಲ್ ನಾಯಕ ಮತ್ತು ದಂತಕಥೆ ಸುನಿಲ್ ಛೆಟ್ರಿ ಭಾನುವಾರ ಫೀಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅವರು ತಮ್ಮ ಫುಟ್‌ಬಾಲ್ ವೃತ್ತಿಜೀವನದ ಪಾಠಗಳನ್ನು ನಾರ್ತ್-ಈಸ್ಟ್ ಮತ್ತು ಪ್ಲೇಟ್ ತಂಡಗಳ ಆಟಗಾರರೊಂದಿಗೆ ಹಂಚಿಕೊಂಡಿದ್ದಾರೆ” ಎಂದು ಬರೆದಿದೆ.
📸📸 Head Cricket, NCA – @VVSLaxman281 and Indian Football Captain and Legend – @chetrisunil11 interacting with the boys from North East and Plate Teams. 👌👌 pic.twitter.com/7Vp5k5kGLD
— BCCI (@BCCI) May 9, 2022
37ರ ಹರೆಯದ ಛೆಟ್ರಿ ಭಾರತದ ಪರ 125 ಪಂದ್ಯಗಳನ್ನು ಆಡಿ ದಾಖಲೆ ಬರೆದಿದ್ದಾರೆ. ಈ ಸ್ಟಾರ್ ಫಾರ್ವರ್ಡ್ ಆಟಗಾರ ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 80 ಗೋಲು ಬಾರಿಸಿದ್ದಾರೆ. ವಿಶ್ವದಾದ್ಯಂತ ಸಕ್ರಿಯವಾಗಿರುವ ಫುಟ್ಬಾಲ್ ಆಟಗಾರರಲ್ಲಿ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ವಿಷಯದಲ್ಲಿ ಛೆಟ್ರಿ ಮೂರನೇ ಸ್ಥಾನದಲ್ಲಿದ್ದಾರೆ. ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ 115 ಗೋಲುಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ 81 ಗೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಫುಟ್‌ಬಾಲ್‌ನಲ್ಲಿ ಸುನಿಲ್ ಛೆಟ್ರಿ ಅವರ ಫಿಟ್‌ನೆಸ್ ಎಲ್ಲರಿಗೂ ಮಾದರಿ. ಇಬ್ಬರೂ ಒಳ್ಳೆಯ ಸ್ನೇಹಿತರು. ಕಳೆದ ವರ್ಷ ಇಬ್ಬರೂ Instagram ನಲ್ಲಿ ಒಟ್ಟಿಗೆ ಲೈವ್ ನಲ್ಲಿ ಕಾಣಿಸಿಕೊಂಡಿದ್ದರು. ಎನ್ ಸಿಎಯಲ್ಲಿ ಛೆಟ್ರಿ ಫೀಲ್ಡಿಂಗ್ ಮಾಡಿದ್ದನ್ನು ಕಂಡು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.