ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಶನಿವಾರ ನಡೆದ ರೋಚಕ ಪಂದ್ಯದಲ್ಲಿ ಬೆಂಗಳೂರು ತಂಡ ಅಮೋಘ ಆಟ ಪ್ರದರ್ಶಿಸಿ 16 ರನ್ಗಳ ಜಯ ಸಾಧಿಸಿತು. ಪಂದ್ಯದಲ್ಲಿ ವಿರಾಟ್ ಕೊಹ್ಲಿ 7.5 ಅಡಿ ಎತ್ತರಕ್ಕೆ ಜಿಗಿದು ಒಂದೇ ಕೈಯಿಂದ ಅದ್ಭುತ ಕ್ಯಾಚ್ ಪಡೆದರು.
ಡೆಲ್ಲಿ ಪರ ರಿಷಬ್ ಪಂತ್ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದರು. DC ಪಂದ್ಯವನ್ನು ಸುಲಭವಾಗಿ ಗೆಲ್ಲುತ್ತಾರೆ ಎಂದು ತೋರುತ್ತಿತ್ತು. ಮೊಹಮ್ಮದ್ ಸಿರಾಜ್ 17 ನೇ ಓವರ್ ಮಾಡುತ್ತಿದರು. ಪಂತ್, ಎರಡನೇ ಎಸೆತದಲ್ಲಿ ಅದ್ಭುತ ಸಿಕ್ಸರ್ ಕೂಡ ಬಾರಿಸಿದರು. ಸಿಕ್ಸರ್ ಹೊಡಿಸಿಕೊಂಡ ಬಳಿಕ ಸಿರಾಜ್ ಅವರು ಆಫ್ ಸ್ಟಂಪ್ ಹೊರಗೆ ಚೆಂಡನ್ನು ಪಂತ್ ಗೆ ಮಾಡಿದರು.
ರಿಷಭ್ ಚೆಂಡನ್ನು ಎಕ್ಸ್ಟ್ರಾ ಕವರ್ ಬೌಂಡರಿ ದಾಟಿಸಲು ಬಯಸಿದ್ದರು, ಆಗ ಕೊಹ್ಲಿ ಜಿಗಿದು ಕ್ಯಾಚ್ ಪಡೆದರು. ಕೊಹ್ಲಿಯ ಈ ಅದ್ಭುತ ಕ್ಯಾಚ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆರ್ಸಿಬಿ ಪಂದ್ಯ ವೀಕ್ಷಿಸಲು ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಕೂಡ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಕ್ಯಾಚ್ ಪಡೆದ ವಿರಾಟ್ ಅನುಷ್ಕಾ ಜೊತೆ ಸಂಭ್ರಮಿಸಿದರು. ಅನುಷ್ಕಾ ತುಂಬಾ ಖುಷಿಯಿಂದ ಕಾಣುತ್ತಿದ್ದರು.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ RCB 13 ರನ್ಗಳಿಗೆ ಮೊದಲ ಎರಡು ವಿಕೆಟ್ಗಳನ್ನು ಕಳೆದುಕೊಂಡಿತು. ಕಠಿಣ ಪರಿಸ್ಥಿತಿಯಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿಯಿಂದ ಆರ್ಸಿಬಿ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಿತ್ತು. ವಿರಾಟ್ 14 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿ ರನ್ ಔಟ್ ಆದರು.