ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಬಿಡಬ್ಲ್ಯುಎಫ್ ರಾಂಕಿಂಗ್ನಲ್ಲಿ ಆರನೆ ಸ್ಥಾನ ಪಡೆದಿದ್ದಾರೆ.
ಮಂಗಳವಾರ ವಿಶ್ವ ಬಿಡಬ್ಲ್ಯುಎಫ್ ರಾಂಕಿಂಗ್ ಪ್ರಕಟವಾಗಿದೆ. ಯುವ್ ಆಟಗಾರ ಲಕ್ಷ್ಯಸೇನ್ ಆರನೆ ಪಡೆದಿದ್ದು ವೃತ್ತಿ ಜೀವನದಲ್ಲಿಯೇ ಶ್ರೇಷ್ಠ ಸಾಧನೆಯಾಗಿದೆ.
2022ರ ವರ್ಷ ಲಕ್ಷ್ಯ ಪಾಲಿಗೆ ಅವಿಸ್ಮರಣೀಯ. ಕಾಮನ್ವೆಲ್ತ್ ಗೇಮನ್ಸ್ ನಲ್ಲಿ ಚಿನ್ನ, ಥಾಮಸ್ ಕಪ್ ವಿಜೇತ ತಂಡದ ಭಾಗವಾಗಿದ್ದರು.
ಆದರೆ ಕಳೆದ ಕೆಲವು ತಿಂಗಳು ಸೇನ್ ಪಾಲಿಗೆ ಕಠಿಣವಾಗಿದ್ದವು. ವಿಶ್ವ ಚಾಂಪಿಯನ್ಶಿಪ್ ನಂತರ ಶಸ್ತ್ರ ಚಿಕಿತ್ಸೆ ಗುರಿಯಾಗಿದ್ದರು.
ಇನ್ನು ತಾರಾ ಆಟಗಾರ್ತಿ ಪಿ.ವಿ ಸಿಂಧು ಸಿಂಗಲ್ಸ್ ವಿಭಾಗದಲ್ಲಿ ಐದನೆ ಶ್ರೇಯಾಂಕ ಪಡೆದಿದ್ದಾರೆ,.

ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಒಂದು ಸ್ಥಾನ ಜಿಗಿದು 7ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಮಹಿಳಾ ಡಬಲ್ಸ್ ನಲ್ಲಿ ಟ್ರೆಸ್ಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್ ಐದು ಸ್ಥಾನ ಜಿಗಿದು 23ನೇ ಶ್ರೇಯಾಂಕ ಪಡೆದಿದ್ದಾರೆ. ಮಿಶ್ರ ಡಬಲ್ಸ್ ನಲ್ಲಿ ಇಶಾನ್ ಭಟನಗರ್ ಮತ್ತು ತನಿಶಾ ಕ್ರಾಸ್ಟೊ 28ನೇ ಸ್ಥಾನ್ಕೆ ಜಿಗಿದಿದ್ದಾರೆ.