ಇಂದಿನಿಂದ ಪ್ರತಿಷ್ಠಿತ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‍ಶಿಪ್ ಆರಂಭವಾಗಲಿದ್ದು ತಾರಾ ಬಾಕ್ಸರ್‍ಗಳಾಸ ನಿಖಾತ್ ಜರೀನ್ ಹಾಗು ಲವ್ಲಿನಾ ಬೋರ್ಗೆಹೈನ್ ಕಣದಲ್ಲಿದ್ದಾರೆ.
ಆರು ಬಾರಿ ಚಾಂಪಿಯನ್ ಮೇರಿ ಕೋಮ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ನಿಖಾತ್ ಜರೀನ್ ಮತ್ತು ಲವ್ಲಿನಾ 12 ಬಾಕ್ಸರ್‍ಗಳನ್ನೊಳಗೊಂಡ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಸಮೀಪಿಸುತ್ತಿರುವುದರಿಂದ ಇಬ್ಬರು ಬಾಕ್ಸರ್‍ಗಳು ಹೊಸ ತೂಕದ ವಿಭಾಗಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ವಿಶ್ವದ ನಾಲ್ಕನೆ ಶ್ರೇಯಾಂಕಿತೆ ಬಾಕ್ಸರ್ ನಿಖಾತ್ 52 ಕೆಜಿ. ವಿಭಾಗವನ್ನು ಕಡಿತಗೊಳಿಸಿದ್ದಾರೆ. ಕಳೆದ ವರ್ಷ 50ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು.
ಮತ್ತೋರ್ವ ಮಹಿಳಾ ಬಾಕ್ಸರ್ ಲವ್ಲಿನಾ 69.ಕೆ.ಜಿಯಿಂದ 75ಕೆ.ಜಿ.ಗೆ (ಮಿಡ್ಲ್ ವೇಟ್ ವಿಭಾಗ) ಹೆಚ್ಚಿಸಿಕೊಂಡಿದ್ದಾರೆ. ಈ ಹಿಂದೆ ನಿಖಾತ್ 50ಕೆ.ಜಿ ವಿಭಾಗದಲ್ಲಿ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದರು.
ಇದೀಗ ಹೊಸ ವಿಭಾಗದಲ್ಲಿ ಅಗ್ರ ಬಾಕ್ಸರ್‍ಗಳನ್ನು ಎದುರಿಸಬೇಕಾದ ಸವಾಲು ಎದುರಾಗಿದೆ.
75ಕೆ.ಜಿ ವಿಭಾಗದಲ್ಲಿ ಲವ್ಲಿನಾ ಏಷ್ಯಾನ್ ಚಾಂಪಿಯನ್‍ಶಿಪ್ ಗೆದ್ದುಕೊಂಡಿದ್ದರು. ಹೊಸ ವಿಭಾಗಕ್ಕೆ ಹೊಂದಿಕೊಳ್ಳುತ್ತಿದ್ದಾರೆ.
ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ನೀತು ಗಂಗಾಸ್ (48ಕೆಜಿ) ಮತ್ತು ಕಳೆದ ಬಾರಿಯ ಕಂಚಿನ ಪದಕ ವಿಜೇತೆ ಮನೀಷಾ ಮೌನ್ (57ಕೆಜಿ) ಸ್ರ್ಪಸುತ್ತಿದ್ದಾರೆ. ಸಾಕ್ಷಿ ಚೌಧರಿ(52ಕೆ.ಜಿ), ಪ್ರೀತಿ (54ಕೆಜಿ), ಶಶಿ ಚೋಪ್ರ (63ಕೆಜಿ), ಸಾನಾಮ್ಚಾ ಚಾನು (70ಕೆಜಿ) ಭರವಸೆ ಮೂಡಿಸಿದ್ದಾರೆ.
ಭಾರತ ತಂಡ: ನೀತು ಗಂಗಾಸ್(48ಕೆಜಿ,), ನಿಖಾತ್ ಜರೀನ್ (50ಕೆಜಿ), ಸಾಕ್ಷಿ ಚೌಧರಿ(52ಕೆಜಿ), ಪ್ರೀತಿ(554ಕೆಜಿ(, ಮನೀಷಾ ಮೌನ್(57ಕೆಜಿ), ಜಾಸ್ಮೀನ್ ಲಾಮಬೊರಿಯಾ (60ಕೆಜಿ), ಶಶಿ ಚೋಪ್ರಾ (63ಕೆಜಿ), ಮಂಜು ಬಾಮಬೊರಿಯಾ (66ಕೆಜಿ), ಸಾನಾಮ್ಚಾ ಚಾನು(70ಕೆಜಿ), ಲವ್ಲಿನಾ ಬೊರೊಗೊಹೈನ್ (75ಕೆಜಿ) ಮತ್ತು ನೂಪೂರ್ ಶೆರಾನ್(81+ಕೆಜಿ).
3 ಬಾಕ್ಸರ್‍ಗಳಿಗೆ ಹಿನ್ನಡೆ
ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ಗೆ ಭಾರತ ತಂಡಕ್ಕೆ ಆಯ್ಕೆ ಮಾಡದ ಕಾರಣ ಬಾಕ್ಸಿಂಗ್ ಫೆಡರೇಶನ್ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲ್ಲೇರಿದ್ದ ಮೂವರು ಬಾಕ್ಸರ್‍ಗಳಿಗೆ ಹಿನ್ನಡೆಯಾಗಿದೆ. ರಾಷ್ಟ್ರೀಯ ಚಾಂಪಿಯನ್ನರಾದ ಮಂಜು ರಾಣಿ, ಶಿಕ್ಷಾ ನರ್ವಾಲ್, ಪೂನಮ್ ಪೂನಿಯಾ ಕೋರ್ಟ್ ಮೆಟ್ಟಿಲ್ಲೇರಿದ್ದರು. ಅರ್ಜಿ ವಿಚಾರಿಸಿದ ನ್ಯಾಯಾೀಶೆ ಪ್ರತಿಭಾ ಸಿಂಗ್ ಬಾಕ್ಸರ್‍ಗಳ ಆಯ್ಕೆಯಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸುವುದಿಲ್ಲ.