ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮುಕ್ತಾಯಗೊಂಡಿದ್ದು, ಅತಿಥೇಯ ಭಾರತ 2-1ರ ಅಂತರದಿಂದ ಸರಣಿ ಗೆಲ್ಲುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಅಹ್ಮದಾಬಾದ್ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿತು. ಆ ಮೂಲಕ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನ ಗೆದ್ದು ಆಸೀಸ್ ವಿರುದ್ಧ ತನ್ನ ಪ್ರಾಬಲ್ಯ ಮೆರೆದಿದೆ. ನಾಲ್ಕು ಪಂದ್ಯಗಳ ಸರಣಿ ಮುಕ್ತಾಯದ ಬಳಿಕ ಸರಣಿಯ ಬ್ಯಾಟಿಂಗ್ ಚಾರ್ಟ್ ಗಮನಿಸಿದರೆ ಆಸೀಸ್ನ ಉಸ್ಮಾನ್ ಖವಾಜ ಹಾಗೂ ಭಾರತದ ವಿರಾಟ್ ಕೊಹ್ಲಿ ಗರಿಷ್ಠ ರನ್ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ ಸರಣಿಯಲ್ಲಿ 333 ರನ್ಗಳಿಸಿದ್ದು, 180 ರನ್ಗಳ ಗರಿಷ್ಠ ಸ್ಕೋರ್ ಹೊಂದಿದ್ದರೆ. ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ, 186 ರನ್ಗಳ ಗರಿಷ್ಠ ಸ್ಕೋರ್ ಸಹಿತ 297 ರನ್ಗಳಿಸಿದ್ದಾರೆ. ಇನ್ನೂ ಭಾರತ ಆಲ್ರೌಂಡರ್ ಅಕ್ಸರ್ ಪಟೇಲ್ 88ರ ಬ್ಯಾಟಿಂಗ್ ಸರಾಸರಿಯಲ್ಲಿ 264 ರನ್ಗಳಿಸಿ 3ನೇ ಸ್ಥಾನದಲ್ಲಿದ್ದರೆ. ಮಾರ್ನಸ್ ಲಬುಶೇನ್ 244 ರನ್ಗಳೊಂದಿಗೆ 4ನೇ ಸ್ಥಾನ ಪಡೆದುಕೊಂಡಿದ್ದರೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ, 120 ರನ್ಗಳ ಗರಿಷ್ಠ ಸ್ಕೋರ್ನೊಂದಿಗೆ 242 ರನ್ಗಳಿಸಿದ್ದಾರೆ.
BGT Series, Virat Kohli, Usman Khawaja, Team India, Australia, Test Series