ಇಂಡಿಯನ್ ಪ್ರೀಮಿಯರ್ ಲೀಗ್ ಹೋರಾಟದಲ್ಲಿ ಯಾರೂ ಶಾಶ್ವತ ಗೆಳೆಯರಲ್ಲ, ಯಾರೂ ಕೂಡ ಶಾಶ್ವತ ಶತ್ರುಗಳಲ್ಲ. ಸಮಯ ಬಂದಾಗ ಒಬ್ಬರ ಎದುರು ಮತ್ತೊಬ್ಬರು ಹೋರಾಟ ಮಾಡಲೇಬೇಕು. ಶುಕ್ರವಾರದ ಹೋರಾಟದಲ್ಲಿ ಇಬ್ಬರು ಬೆಸ್ಟ್ ಫ್ರೆಂಡ್ಸ್ ನಡುವೆ ಹೋರಾಟ ನಡೆಯಲಿದೆ. ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ಮತ್ತು ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಪುಣೆಯ ಎಂಸಿಎ ಮೈದಾನದಲ್ಲಿ ಅಖಾಡಕ್ಕೆ ಇಳಿಯಲಿವೆ.
ಲಖನೌ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಪಂಜಾಬ್ 8ರಲ್ಲಿದೆ. ಹೀಗಾಗಿ ಎರಡೂ ತಂಡಗಳಿಗೂ ಗೆಲುವು ಅನಿವಾರ್ಯ. ಲಖನೌ ತಂಡ ಬ್ಯಾಲೆನ್ಸ್ ಆಗಿ ಕಾಣುತ್ತಿದೆ. ಆದರೆ ಟಾಪ್ ಆರ್ಡರ್ ಬ್ಯಾಟಿಂಗ್ ಬಲದ ಮೇಲೆ ಹೆಚ್ಚು ನಂಬಿಕೆ ಇಟ್ಟುಕೊಂಡಿದೆ. ಕೆ.ಎಲ್. ರಾಹುಲ್ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಕ್ವಿಂಟಾನ್ ಡಿ ಕಾಕ್ ಫಾರ್ಮ್ ಬಗ್ಗೆ ಅಸ್ಥಿರತೆ ಇದೆ. ಕೃನಾಲ್ ಪಾಂಡ್ಯಾ ಭಡ್ತಿ ಕೆಲಸಕ್ಕೆ ಬಂದಿದೆ. ಆಯುಷ್ ಬಡೋನಿ ಮತ್ತು ದೀಪಕ್ ಹೂಡ ಆರಂಭದಲ್ಲಿ ತೋರಿದ ಆಟ ಮರೆತಿದ್ದರೂ ಅವರ ಬಗ್ಗೆ ನಂಬಿಕೆ ಇದೆ. ಮಾರ್ಕಸ್ ಸ್ಟೋಯ್ನಿಸ್ ಬ್ಯಾಟಿಂಗ್ ಆಲ್ರೌಂಡರ್ ಆದರೆ, ಜೇಸನ್ ಹೋಲ್ಡರ್ ಬೌಲಿಂಗ್ ಆಲ್ ರೌಂಡರ್.
ಬೌಲಿಂಗ್ನಲ್ಲಿ ದುಷ್ಮಂತ್ ಚಾಮಿರ ಸ್ಪೀಡ್ ಸ್ಟಾರ್. ಹೋಲ್ಡರ್ ಮತ್ತು ಆವೇಶ್ ಖಾನ್ ರನ್ ಬೇಟೆಗೆ ಕಡಿವಾಣ ಹಾಕುವ ಸ್ಪೆಷಲಿಸ್ಟ್ ಗಳು. ರವಿಬಿಷ್ಣೋಯಿ ಲೆಗ್ ಸ್ಪಿನ್ನರ್, ಕೃನಾಲ್ ಪಾಂಡ್ಯಾ, ಸ್ನೋಯ್ನಿಸ್ ಮತ್ತು ದೀಪಕ್ ಹೂಡ 5ನೇ ಬೌಲರ್ ಕೋಟಾ ಮುಗಿಸಬಲ್ಲರು. ಮನೀಷ್ ಪಾಂಡೆ ಸ್ಥಾನ ಚರ್ಚೆಯಲ್ಲಿದ್ದರೂ ಅವಕಾಶ ಸಿಗಬಹುದು.
ಪಂಜಾಬ್ ಸಿಎಸ್ಕೆ ವಿರುದ್ಧದ ಪಂದ್ಯ ಗೆದ್ದ ಮೇಲೆ ಆತ್ಮವಿಶ್ವಾಸದಲ್ಲಿದೆ. ಆದರೆ ಕಾಂಬಿನೇಷನ್ನಲ್ಲಿ ಬದಲಾವಣೆಯಾಗಬಹದು. ಶಿಖರ್ ಜೊತೆ ಮಾಯಂಕ್ ಇನ್ನಿಂಗ್ಸ್ ಆರಂಭಿಸಬಹುದು. ಲಿವಿಂಗ್ ಸ್ಟೋನ್ ಮತ್ತು ಭಾನುಕಾ ರಾಜಪಕ್ಸ ಸಿಕ್ಸರ್, ಬೌಂಡರಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಸತತವಾಗಿ ವೈಫಲ್ಯ ಕಾಣುತ್ತಿರುವ ಜಾನಿ ಬೇರ್ ಸ್ಟೋವ್ ಬದಲು ಓಡಿನ್ ಸ್ಮಿತ್ ಆಡಿದರೆ ಫಿನಿಷರ್ ಜೊತೆ ಎಕ್ಸ್ ಟ್ರಾ ಬೌಲರ್ ಸಿಕ್ಕಾಂತಾಗುತ್ತದೆ. ಜಿತೇಶ್ ಶರ್ಮಾ, ರಿಷಿ ಧವನ್ ಕೂಡ ಬ್ಯಾಟಿಂಗ್ ಮಾಡಬಲ್ಲರು.
ಬೌಲಿಂಗ್ನಲ್ಲಿ ಅರ್ಶದೀಪ್ ಸಿಂಗ್, ರಾಹುಲ್ ಚಹರ್, ಸಂದೀಪ್ ಶರ್ಮಾ ಮತ್ತು ಕಗಿಸೋ ರಬಾಡಾ ಮಿಂಚಬೇಕು. ರಿಷಿಧ ಧವನ್ ಬೌಲಿಂಗ್ ಕೂಡ ಚೆನ್ನಾಗಿದೆ.
ಆರಂಭದಲ್ಲಿ ಬ್ಯಾಟಿಂಗ್ ಫ್ರೆಂಡ್ಲಿಯಾಗಿದ್ದ ಎಂಸಿಎ ಪಿಚ್ ಪಂದ್ಯದಿಂದ ಪಂದ್ಯಕ್ಕೆ ವಿಭಿನ್ನವಾಗುತ್ತಿದೆ. ಇಷ್ಟಾದರೂ ಟಾಸ್ ಗೆದ್ದವರು ಮೊದಲು ಬ್ಯಾಟಿಂಗ್ ಆರಿಸಿಕೊಳ್ಳುವು ಕಷ್ಟ.