5ನೇ ಅವೃತ್ತಿಯ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಅನಿರುದ್ಧ ಚಂದ್ರಶೇಖರ್ ಮತ್ತು ಪ್ರಶಾಂತ್ ರನ್ನರ್ ಅಪ್ಗೆ ತೃಪ್ತಿಪಟ್ಟಿದ್ದಾರೆ. ಕಳೆದೆರಡು ಆವೃತ್ತಿಗಳಲ್ಲಿ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತ ಈ ಬಾರಿ ವಿಫಲವಾಯಿತು.
ಬೆಂಗಳೂರಿನಲ್ಲಿ ನಡೆದ ಪುರುಷರ ಡಬಲ್ಸ್ ಫೈನಲ್ನಲ್ಲಿ ಭಾರತದ ಜೋಡಿ ದ.ಆಫ್ರಿಕಾದ ಚುಂಗ್ ಯನ್ ಸಿಯಾಂಗ್ , ಚೈನೀಸ್ ತೈಪೈನ ಯು ಸು ವಿರುದ್ಧ 6-3, 6-7, 9-11 ಅಂಕಗಳಿಂದ ವಿರೋಚಿತ ಸೋಲು ಅನುಭವಿಸಿತ.
ಮೊದಲ ಸೆಟ್ನಲ್ಲಿ ಪ್ರಾಬಲ್ಯ ಸಾಧಿಸಿ ಗೆದ್ದುಕೊಂಡಿತು. 2ನೇ ಸೆಟ್ನಲ್ಲೂ ಭಾರತದ ಜೋಡಿ ಉತ್ತಮ ಆರಂಭ ನೀಡಿತು. ಆದರೆ ನಂತರ ತಿರುಗಿ ಬಿದ್ದ ಕೊರಿಯಾ ತೈಪೈ ಜೋಡಿ ಸೆಟ್ ಗೆದ್ದ ಸಮಬಲ ಗೊಳಿಸಿತು.
ಟೈ ಬ್ರೇಕರ್ನಲ್ಲಿ ಉಭಯ ತಂಡಗಳು ತೀವ್ರ ಪೈಪೋಟಿ ನೀಡಿದವು. ಪ್ರಶಾಂತ್ ಮತ್ತು ಚಂದ್ರ ಶೇಖರ್ ಪಂದ್ಯ ಗೆಲ್ಲಿಸುವಲ್ಲಿ ವಿಫಲರಾದರು.