ಟೀಮ್ ಇಂಡಿಯಾಗೆ ಆಯ್ಕೆಯಾಗಲು ಆಟಗಾರರಿಗೆ ಯೋ ಯೋ ಫಿಟ್ನೆಸ್ ಪರೀಕ್ಷೆಯೇ ಮಾನದಂಡ ಎಂದು ಬಿಸಿಸಿಐ ಹೇಳಿದೆ. ಯೋ ಯೋ ಫಿಟ್ನೆಸ್ ಪರೀಕ್ಷೆಯನ್ನು ಬಿಸಿಸಿಐ ಮರು ಬಳಕೆ ಮಾಡಲು ತೀರ್ಮಾನಿಸಿದೆ.
ಟಿ20 ವಿಶ್ವಕಪ್ ಸೋಲಿನ ಕುರಿತು ಬಸಿಸಿಐ ಪುನರಾವಲೋಕನ ಸಭೆ ನಡೆಸಿತು. ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್, ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಚರ್ಚಿಸಿದರು.
ಯೋ ಯೋ ಟೆಸ್ಟ್ ಜತೆಗೆ ಡೆಕ್ಸಾ (ಮೂಳೆ ಸ್ಕ್ಯಾನ್ ಪರೀಕ್ಷೆ) ಆಟಗಾರರ ಆಯ್ಕೆಗೆ ಮಾನದಂಡವಾಗಿ ಪರಿಗಣಿಸಲಾಗಿದೆ. ಉದಯೋನ್ಮುಖ ಆಟಗಾರರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು (ವೈಟ್ ಬಾಲ್ ಮತ್ತು ರೆಡ್ ಬಾಲ್ ಕ್ರಿಕೆಟ್ಗೆ ಅರ್ಹತೆ ಪಡೆಯಲು) ಹೆಚ್ಚು ಹೆಚ್ಚು ದೇಸಿ ಟೂರ್ನಿಗಳನ್ನು ಆಡಿರಬೇಕು.
ಯೋ ಯೋ ಪರೀಕ್ಷೆ ಮತು ಡೆಕ್ಸಾ ಪರೀಕ್ಷೆ ಆಯ್ಕೆಗೆ ಪರಿಗಣಿಸಲಾಗುತ್ತದೆ. ಆಟಗಾರರ ಆಯ್ಕೆಗೆ ಜಾರಿಗೊಳಿಸಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ.
ವೇಳಾಪಟ್ಟಿ ಮತ್ತು 2023ರ ವಿಶ್ವಕಪ್ ತಯಾರಿ ಹಾಗೂ ಐಪಿಎಲ್ನಲ್ಲಿ ಆಡುವ ಆಟಗಾರರ ದೃಷ್ಟಿಯಲ್ಲಿಟ್ಟುಕೊಂಡು ಆಯ್ಕೆ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಸಭೆಯಲ್ಲಿ 2023ರ ವಿಶ್ವಕಪ್ ತಯಾರಿ ಕುರಿತು ಚರ್ಚಿಸಲಾಗಿದೆ.