ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್ಗೆ 10 ತಂಡಗಳು ಸಿದ್ಧವಾಗುತ್ತಿವೆ. ಆದರೆ 2023ರ 16ನೇ ಸೀಸನ್ ಬಗ್ಗೆ ಬಿಸಿಸಿಐ ಯೋಜನೆ ರೂಪಿಸುತ್ತಿದೆ. ಬಿಸಿಸಿಐಗೆ ಹಣದ ಹೊಳೆಯನ್ನೇ ಸುರಿಸುತ್ತಿರುವ ಬ್ರಾಡ್ ಕಾಸ್ಟ್ ರೈಟ್ಗಳನ್ನು ಮುಂದಿನ ಸೀಸನ್ನಿಂದ 2 ಚಾನಲ್ಗಳಿಗೆ ಮಾರುವ ಪ್ಲಾನ್ ಬಿಸಿಸಿಐ ರೂಪಿಸಿದೆ. ಕಳೆದ 5 ಸೀಸನ್ಗಳಿಂದ ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ. ಪ್ರಸ್ತುತ ಮಾಹಿತಿ ಪ್ರಕಾರ, ಮುಂಬರುವ ಐಪಿಎಲ್ ಸೀಸನ್ ಪಂದ್ಯಗಳು 2 ರಿಂದ 3 ಚಾನೆಲ್‌ಗಳಲ್ಲಿ ಪ್ರಸಾರವಾಗುವ ಸಾಧ್ಯತೆಯಿದೆ.
ಐಪಿಎಲ್ ಆರಂಭವಾದಾಗಿನಿಂದ ಇಲ್ಲಿಯವರೆಗೆ ಟೂರ್ನಿಯನ್ನು ಒಂದು ಚಾನಲ್ ಮಾತ್ರ ಪ್ರಸಾರ ಮಡುತ್ತಿದೆ. 2008 ರಿಂದ 2017ರ ತನಕ ಸೋನಿ ಪ್ರಸಾರ್ ಹಕ್ಕು ಪಡೆದಿತ್ತು. 2018ರಿಂದ 2022ರ ತನಕ ಸ್ಟಾರ್ ಪ್ರಸಾರದ ಹಕ್ಕು ಪಡೆದಿದೆ. ಈ ಸೀಸನ್ ಮುಗಿದ ಬಳಿಕ ಹೊಸ ಬಿಡ್ಡಿಂಗ್ ನಡೆಯಲಿದೆ. ಈ ಮೂಲಕ ದೊಡ್ಡ ಮೊತ್ತದ ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ ಬಿಸಿಸಿಐ.
ಹೊಸ ಹರಾಜಿನಲ್ಲಿ ಕೇವಲ ಒಂದು ಪ್ರಸಾರಕರಿಗೆ ಎಲ್ಲಾ ಹಕ್ಕುಗಳನ್ನು ನೀಡುವ ಬದಲು, ಭಾರತೀಯ ಕ್ರಿಕೆಟ್ ಮಂಡಳಿಯು ಪಂದ್ಯಗಳ ಪ್ರಸಾರವನ್ನು 3 ರಿಂದ 4 ಬಿಡ್‌ದಾರರಿಗೆ ಸಮಾನ ಅಥವಾ ವಿಭಿನ್ನ ಪ್ರಮಾಣದಲ್ಲಿ ವಿತರಿಸುವ ಸಾಧ್ಯತೆಯಿದೆ. ಈ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವ ಮೂಲಕ ಹೊಸ ಒಪ್ಪಂದದಿಂದ 30 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಆದಾಯ ಸಿಗಲಿದೆ ಎಂದು ಮಂಡಳಿ ನಿರೀಕ್ಷಿಸಿದೆ.
ಸೋನಿ, ರಿಲಯನ್ಸ್ ಗ್ರೂಪ್ ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋ ಹೊಸ ಒಪ್ಪಂದಕ್ಕೆ ಬಿಡ್ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಡಿಜಿಟಲ್ ಮತ್ತು ಟಿವಿ ರೈಟ್ಸ್ ಎರಡನ್ನೂ ಬೇರೆ ಬೇರೆಯಾಗಿ ನೀಡಲು ಬಿಸಿಸಿಐ ಯೋಜನೆ ರೂಪಿಸಿದೆ. ಒಟ್ಟಿನಲ್ಲಿ ದುಡ್ಡು ಹೇಗೆ ಮಾಡಬೇಕು ಅನ್ನುವುದನ್ನು ಬಿಸಿಸಿಐ ವಿಶ್ವ ಕ್ರಿಕೆಟ್ಗೆ ತೋರಿಸಿಕೊಡುತ್ತಿದೆ.