ನಜ್ಮುಲ್ ಹೊಸೈನ್ ಶ್ಯಾಂಟೋ(51) ಹಾಗೂ ನಾಯಕ ಶಕೀಬ್ ಅಲ್ ಹಸನ್(34*) ಜವಾಬ್ದಾರಿಯ ಬ್ಯಾಟಿಂಗ್ನಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಚಿತ್ತಗಾಂಗ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಆರಂಭಿಕರಾದ ನಾಯಕ ಜೋಸ್ ಬಟ್ಲರ್(67) ಹಾಗೂ ಫಿಲಿಪ್ ಸ್ಲಟ್(38) ಅವರುಗಳ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ಗೆ 156 ರನ್ಗಳಿಸಿತು. ಟಾರ್ಗೆಟ್ ಚೇಸ್ ಮಾಡಿದ ಬಾಂಗ್ಲಾದೇಶ 18 ಓವರ್ಗಳಲ್ಲಿ 4 ವಿಕೆಟ್ಗೆ 158 ರನ್ಗಳಿಸುವ ಮೂಲಕ 6 ವಿಕೆಟ್ಗಳ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ಬಾಂಗ್ಲಾದೇಶ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ಗೆ ಫಿಲಿಪ್ ಸ್ಲಟ್(38) ಹಾಗೂ ಜೋಸ್ ಬಟ್ಲರ್(67) ಮೊದಲ ವಿಕೆಟ್ಗೆ 80 ರನ್ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ ನಂತರ ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯಕ್ಕೆ ಸಿಲುಕಿದ ಇಂಗ್ಲೆಂಡ್, 20 ಓವರ್ಗಳಲ್ಲಿ 6 ವಿಕೆಟ್ಗೆ 156 ರನ್ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾದೇಶ ಪರ ಹಸನ್ ಮಮೂದ್ 2 ವಿಕೆಟ್ ಪಡೆದರೆ, ನಸುಮ್ ಅಹ್ಮದ್, ತಸ್ಕಿನ್ ಅಹ್ಮದ್, ಮುಸ್ತಫಿಜು಼ರ್ ಹಾಗೂ ಶಕೀಬ್ ತಲಾ 1 ವಿಕೆಟ್ ಪಡೆದರು.
ಇಂಗ್ಲೆಂಡ್ ನೀಡಿದ 157 ರನ್ ಟಾರ್ಗೆಟ್ ಚೇಸ್ ಮಾಡಿದ ಬಾಂಗ್ಲಾದೇಶ ಸಾಧಾರಣ ಆರಂಭ ಕಂಡಿತು. ಆರಂಭಿಕರಾಗಿ ಬಂದ ಲಿಟನ್ ದಾಸ್(12) ಹಾಗೂ ರೋನಿ ತಲೂಕ್ದರ್(21) ರನ್ಗಳಿಸಿದರು. ನಂತರದಲ್ಲಿ ಬಂದ ಶ್ಯಾಂಟೋ(51) ಜವಾಬ್ದಾರಿಯ ಬ್ಯಾಟಿಂಗ್ನಿಂದ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರು. ಬಳಿಕ ಕಣಕ್ಕಿಳಿದ ತೌಹಿದ್ ಹೃದೋಯ್(24) ಉಪಯುಕ್ತ ರನ್ಗಳಿಸಿದರೆ. ನಾಯಕ ಶಕೀಬ್ (34*) ಹಾಗೂ ಹೊಸೈನ್(15*) ಉತ್ತಮ ಆಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇಂಗ್ಲೆಂಡ್ ಪರ ಆರ್ಚರ್, ರಶೀದ್, ವುಡ್ ಹಾಗೂ ಅಲಿ ತಲಾ 1 ವಿಕೆಟ್ ಪಡೆದರು.
ಭರ್ಜರಿ ಬ್ಯಾಟಿಂಗ್ನಿಂದ ಅರ್ಧಶತಕ ಬಾರಿಸಿ ಮಿಂಚಿದ ನಜ್ಮುಲ್ ಹೊಸೈನ್ ಶ್ಯಾಂಟೋ(51) ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಉಭಯ ತಂಡಗಳ ನಡುವಿನ 2ನೇ ಟಿ20 ಪಂದ್ಯ ಮಾರ್ಚ್ 12ರಂದು ಢಾಕಾದಲ್ಲಿ ನಡೆಯಲಿದೆ.
BAN v ENG, England, Bangladesh, T20I Series, Sports Karnataka