Badminton: ಭಾರತದ ಮಿಶ್ರ ಜೋಡಿ ಸೆಮೀಸ್ ಗೆ
ಭಾರತದ ಭರವಸೆಯ ಬ್ಯಾಡ್ಮಿಂಟನ್ ಪಟುಗಳಾದ ಎನ್.ಸಿಕ್ಕಿ ರೆಡ್ಡಿ ಹಾಗೂ ರೋಹನ್ ಕಪೂರ್ ಜೋಡಿ ವಿಯೆಟ್ನಾಂ ಓಪನ್ ಸೂಪರ್ 100 ಟೂರ್ನಿಯ ಮಿಶ್ರ ಡಬಲ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಎನ್.ಸಿಕ್ಕಿ ರೆಡ್ಡಿ ಹಾಗೂ ರೋಹನ್ ಕಪೂರ್ 21-19, 21-17 ರಿಂದ ಮಲೇಷಿಯಾದ ಚಾನ್ ಪೆಂಗ್ ಸೂನ್ ಮತ್ತು ಚೀಹ್ ಯೀ ಸೀ ಅವರ ವಿರುದ್ಧ 39 ನಿಮಿಷಗಳ ಕಾದಾಟದಲ್ಲಿ ಮುನ್ನಡೆ ಸಾಧಿಸಿದರು.
ಸೆಮಿಫೈನಲ್ನಲ್ಲಿ ಭಾರತದ ಜೋಡಿ ಅಗ್ರ ಶ್ರೇಯಾಂಕದ ಇಂಡೋನೇಷ್ಯಾದ ರೆಹಾನ್ ನೌಫಲ್ ಕುಶರ್ಜಂಟೊ ಮತ್ತು ಲಿಸಾ ಅಯು ಕುಸುಮಾವತಿ ವಿರುದ್ಧ ಕಾದಾಟ ನಡೆಸಲಿದ್ದಾರೆ.
ಸಿಕ್ಕಿ ಮತ್ತು ಕಪೂರ್ ಜೋಡಿ 3-6 ಹಿನ್ನಡೆಯನ್ನು ಅನುಭವಿಸುತ್ತಿತ್ತು. ಮಲೇಷಿಯನ್ನರು 15-12 ಮುನ್ನಡೆ ಸಾಧಿಸಿದರು. ಆದರೆ ಭಾರತದ ಜೋಡಿ ಸತತ ನಾಲ್ಕು ಪಾಯಿಂಟ್ಗಳೊಂದಿಗೆ 19-18 ರಿಂದ ಮುನ್ನಡೆ ಸಾಧಿಸಿ, ಗೆಲುವಿಗೆ ಬೇಕಾದ ಅಂಕಗಳನ್ನು ಕಲೆ ಹಾಕಿ ಮಿಂಚಿತು.
Badminton, Vietnam Open, mixed doubles, N. Sikki Reddy, Rohan Kapoor