ಬಹುನಿರೀಕ್ಷಿತಾ ಬ್ಯಾಡ್ಮಿಂಟನ್ ಏಷ್ಯಾ ಮಿಕ್ಸಡ್ ಟೀಮ್ ಚಾಂಪಿಯನ್ಶಿಪ್ ಇಂದಿನಿಂದ ಆರಂಭವಾಗಲಿದ್ದು ಇಂದು ಭಾರತ ಕಜಕಿಸ್ತಾನ ತಂಡವನ್ನು ಎದುರಿಸಲಿದೆ.
ಪಿ.ವಿ.ಸಿಂಧು ಮತ್ತು ಎಚ್.ಎಸ್.ಪ್ರಣಯ್ ಕಣದಲ್ಲಿದ್ದಾರೆ.
ಬಿ ಗುಂಪಿನ ಸ್ಥಾನದಲ್ಲಿರುವ ಭಾರತ ತಂಡ ಕಜಿಕಿಸ್ತಾನ ವಿರುದ್ಧ ಗೆಲ್ಲುವ ನೆಚ್ಚಿನ ತಂಡವಾಗಿದೆ. ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ಪಿ.ವಿ.ಸಿಂಧು ಗಾಯದ ಸಮಸ್ಯೆಯಿಂದ ಸಂಪೂರ್ಣ ಚೇತರಿಸಿಕೊಂಡಿದ್ದು ಫಿಟ್ ಆಗಿದ್ದಾರೆ.
ಹೊಸ ಋತುವಿನಲ್ಲಿ ಯಶಸ್ಸನ್ನು ಬಯಸುತ್ತಿದ್ದಾರೆ. ಸಿಂಧು ಇತ್ತೀಚೆಗೆ ಮಲೇಷ್ಯಾ ಓಪನ್ ಮತ್ತು ಇಂಡಿಯನ್ ಓಪನ್ನಲ್ಲಿ ಸೋಲು ಕಂಡಿದ್ದರು.
ಪುರುಷರ ಸಿಂಗಲ್ಸ್ನಲ್ಲಿ ವಿಶ್ವದ ನಂ.8 ಪ್ರಣಯ್ ಮತ್ತು 10ನೇ ರಾಂಕ್ ಆಟಗಾರ ಲಕ್ಷ್ಯ ಸೇನ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಪುರುಷರ ಡಬಲ್ಸ್ನಲ್ಲಿ ಚಿರಾಗ್ ಶೆಟ್ಟಿ ಮತ್ತು ಕಪಿಲಾ ಕಣಕ್ಕಿಳಿಯಲಿದ್ದಾರೆ.
ಮಹಿಳಾ ಡಬಲ್ಸ್ ವಿಭಾಗದಲ್ಲಿ ಟ್ರೆಸ್ಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಆಡಲಿದ್ದಾರೆ. ಚೀನಾ, ಜಪಾನ್, ಇಂಡೋನೇಷ್ಯಾ ಮತ್ತು ಮಲೇಷ್ಯಾ ಟೂರ್ನಿಯಲ್ಲಿ ಅಗ್ರ ನಾಲ್ಕು ಶ್ರೇಯಾಂಕಿತ ತಂಡಗಳಾಗಿವೆ.