ಆಸ್ಟ್ರೇಲಿಯನ್ ಓಪನ್ 2022 – ಮಿಕ್ಸೆಡ್ ಡಬಲ್ಸ್ ನಲ್ಲಿ ಸಾನಿಯಾ – ರಾಜೀವ್ ಮುನ್ನಡೆ
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಿಕ್ಸೆಡ್ ಡಬಲ್ಸ್ ನಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕಾದ ರಾಜೀವ್ ರಾಮ್ ಅವರು ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಮತ್ತು ರಾಜೀವ್ ರಾಮ್ ಅವರು 6-3, 7-6ರಿಂದ ಸರ್ಬಿಯಾದ ಅಲೆಕ್ಸಾಂಡ್ರಾ ಕ್ರೌನಿಕ್ ಮತ್ತು ನಿಕೊಲಾ ಕಾಸಿಕ್ ಅವರನ್ನು ಸುಲಭವಾಗಿ ಸೋಲಿಸಿದ್ರು.
ರಾಜೀವ್ ರಾಮ್ ಅವರು ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಮಿಕ್ಸೆಡ್ ಡಬಲ್ಸ್ ನಲ್ಲಿ ಕಳೆದ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಕಳೆದ ಬಾರಿ ರಾಜೀವ್ ರಾಮ್ ಅವರು ಚೆಕ್ ಗಣರಾಜ್ಯದ ಬಾಬ್ರೊರಾ ಕ್ರೆಜಿಕೊವಾ ಜೊತೆ ಸೇರಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಆದ್ರೆ ಈ ಬಾರಿ ರಾಜೀವ್ ರಾಮ್ ಅವರು ಸಾನಿಯಾ ಮಿರ್ಜಾ ಜೊತೆ ಸೇರಿಕೊಂಡು ಮಿಕ್ಸೆಡ್ ಡಬಲ್ಸ್ ನಲ್ಲಿ ಆಡುತ್ತಿದ್ದಾರೆ.
ನಿನ್ನೆ ನಡೆದ ಮಹಿಳೆಯರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಸೋಲು ಅನುಭವಿಸಿದ್ದರು. ಅಲ್ಲದೆ ಈ ವರ್ಷ ಟೆನಿಸ್ ಬದುಕಿಗೆ ವಿದಾಯ ಕೂಡ ಹೇಳಿದ್ದರು.
ಇನ್ನು ಭಾರತದ ರೋಹನ್ ಬೋಪಣ್ಣ ಕೂಡ ಡಬಲ್ಸ್ ನಲ್ಲಿ ಸೋಲು ಅನುಭವಿಸಿದ್ದರು. ಶನಿವಾರ ನಡೆಯಲಿರುವ ಮಿಕ್ಸೆಡ್ ಡಬಲ್ಸ್ ನಲ್ಲಿ ರೋಹನ್ ಬೋಪಣ್ಣ ಅವರು ಕ್ರೋವೇಶಿಯಾದ ಡಾರಿಜಾ ಜುರಾಕ್ ಜೊತೆ ಸೇರಿಕೊಂಡು ಕಣಕ್ಕಿಳಿಯಲಿದ್ದಾರೆ.