australian open 2022 results -ಪ್ರಿ ಕ್ವಾರ್ಟರ್ ಫೈನಲ್ ಗೆ ವಿಕ್ಟೋರಿಯಾ ಆಝಾರೆಂಕಾ
ವಿಕ್ಟೋರಿಯಾ ಆಝಾರೆಂಕಾ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಮೆಲ್ಬರ್ನ್ ಪಾರ್ಕ್ ಅಂಗಣದಲ್ಲಿ ನಡೆದ ಮೂರನೇ ಸುತ್ತಿನ ಪಂದ್ಯದ್ಲಿ ವಿಕ್ಟೋರಿಯಾ ಆಝಾರೆಂಕಾ 6-0, 6-2ರಿಂದ 15ನೇ ಶ್ರೇಯಾಂಕಿತೆ ಎಲಿನಾ ಸ್ವಿಟೊಲಿನಾ ಅವರನ್ನುಪರಾಭವಗೊಳಿಸಿದ್ರು.
ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ವಿಕ್ಟೋರಿಯಾ ಆಝಾರೆಂಕಾ ಅವರು, ಫ್ರೆಂಚ್ ಓಪನ್ ಚಾಂಪಿಯನ್ ಬಾರ್ಬೊರಾ ಕ್ರೆಜೆಕೋವಾ ಅವರನ್ನು ಎದುರಿಸಲಿದ್ದಾರೆ.
ಇನ್ನೊಂದು ಸಿಂಗಲ್ಸ್ ನಲ್ಲಿ ಬಾರ್ಬೊರಾ ಕ್ರೆಜೆಕೊವಾ 2-6, 6-4, 6-4ರಿಂದ ಜೆಲೆನಾ ಒಸ್ಟಾಪೆಂಕೊ ಅವರನ್ನು ಮಣಿಸಿದ್ರು.
ಹಾಗೇ ಮತ್ತೊಂದು ಸಿಂಗಲ್ಸ್ ನಲ್ಲಿ ಸ್ಪೇನ್ ನ ಪೌಲಾ ಬಾಡೊಸಾ 6-2, 5-7, 6-4ರಿಂದ ಉಕ್ರೇನ್ ನ ಮಾರ್ಟಾ ಕೊಸ್ಟ್ಯಾಕ್ ಅವರನ್ನು ಸೋಲಿಸಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ರು.
ಮುಂದಿನ ಪಂದ್ಯದಲ್ಲಿ ಪೌಲಾ ಬಾಡೊಸಾ ಅವರು ಅಮೆರಿಕಾದ ಮ್ಯಾಡಿಸನ್ ಕೈಸ್ ಅಥವಾ ಚೀನಾದ ವಾಂಗ್ ಕಿಯಾಂಗ್ ಅವರನ್ನು ಎದುರಿಸಲಿದ್ದಾರೆ.