ಆಸ್ಟ್ರೇಲಿಯನ್ ಓಪನ್ 2022- ಹಾಲಿ ಚಾಂಪಿಯನ್ ನೌಮಿ ಒಸಾಕಾಗೆ ಆಘಾತ
ಹಾಲಿ ಚಾಂಪಿಯನ್ ಜಪಾನ್ ನೌಮಿ ಒಸಾಕಾ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದ್ದಾರೆ.
ಹಾಲಿ ಚಾಂಪಿಯನ್ ಆಗಿರುವ ನೌಮಿ ಅವರು 4-6, 6-3, 7-6ರಿಂದ ಅಮಾಂಡಾ ಅನಿಸಿಮೊವಾ ವಿರುದ್ಧ ಸೋಲು ಅನುಭವಿಸಿದ್ರು.
ನಾಲ್ಕು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದಿರುವ ನೌಮಿ ಒಸಾಕಾ ಇದೇ ಮೊದಲ ಬಾರಿ ಅಮಾಂಡಾ ವಿರುದ್ಧ ಆಡಿದ್ದಾರೆ. 60ನೇ ಶ್ರೇಯಾಂಕಿತೆಯಾಗಿರುವ ಅಮಾಂಡ ಅವರ ಲಯಬದ್ಧವಾದ ಆಟಕ್ಕೆ ನೌಮಿ ಒಸಾಕಾ ಮಂಕಾಗಿಬಿಟ್ರು.
ನಾಲ್ಕನೇ ಸುತ್ತಿನಲ್ಲಿ ಅಮಾಂಡಾ ಅನಿಸಿಮೊವಾ ಅವರು ನಂಬರ್ ವನ್ ಆಟಗಾರ್ತಿ ಆಸ್ಟ್ರೇಲಿಯಾದ ಆಶ್ಲೇಘ್ ಬಾರ್ಟಿ ಅವರನ್ನು ಎದುರಿಸಲಿದ್ದಾರೆ.
ಇದಕ್ಕು ಮೊದಲು ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಬೆಲರಾಸ್ ನ ವಿಕ್ಟೋರಿಯಾ ಆಝಾರೆಂಕಾ ಮತ್ತು ಚೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜೆಕೊವಾ ಅವರು ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.
ಹಾಗೇ ಸ್ಪೇನ್ ನ ಪೌಲಾ ಬಾಡೊಸಾ ಅವರು ಉಕ್ರೇನ್ ನ ಮಾರ್ಟಾ ಕೊಸ್ಟ್ಯಾಕ್ ಅವರನ್ನು ಮೂರನೇ ಸುತ್ತಿನ ಪಂದ್ಯದಲ್ಲಿ ಜಯ ಸಾಧಿಸಿ ಮುನ್ನಡೆ ಸಾಧಿಸಿದ್ದಾರೆ.