ಗಾಲೆ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದೆ. ಆಸ್ಟ್ರೇಲಿಯಾದ ಸ್ಪಿನ್ ದಾಳಿಮುಂದೆ ಶ್ರೀಲಂಕಾ ಬ್ಯಾಟ್ಸ್ಮನ್ಗಳು ಸಂಪೂರ್ಣ ವೈಫಲ್ಯ ಕಂಡಿದ್ದರಿಂದ ಮೊದಲ ದಿನವೇ ಪ್ರವಾಸಿ ತಂಡ ಮೇಲುಗೈ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಆರಂಭಿಸಿ ಶ್ರೀಲಂಕಾ ತಂಡಕ್ಕೆ ಪಥುಮ್ ನಿಸ್ಸಾಂಕಾ ಮತ್ತು ಧೀಮುತ್ ಕರುಣಾ ರತ್ನೆ ಸಾಧಾರಣಾ ಆರಂಭ ತಂದುಕೊಟ್ಟರು. ಆದರೆ ನಿಸ್ಸಂಕಾ 23 ರನ್ಗಳಿಸಿ ಔಟಾದ್ರೆ, ಕರುಣಾ ರತ್ನೆ 28 ರನ್ಗಳಿಸಿ ಪವೆಲಿಯನ್ ಸೇರಿಕೊಂಡರು. ಇಲ್ಲಿಂದ ಮುಂದೆ ನಾಥನ್ ಲಯನ್ ಮತ್ತು ಮಿಚೆಲ್ ಸ್ವೆಪ್ಸನ್ ಸ್ಪಿನ್ ಬಲೆ ಹೆಣೆದರು.
ಕುಸಾಲ್ ಮೆಂಡೀಸ್ (3), ಧನಂಜಯ ಡಿಸಿಲ್ವಾ (14) ಬೇಗನೆ ಔಟಾದರು. ಆ್ಯಂಜಲೋ ಮ್ಯಾಥ್ಯೂಸ್ 39 ರನ್ ಸಿಡಿಸಿದರೆ, ನಿರೋಶನ್ ಡಿಕ್ವೆಲ್ಲಾ 58 ರನ್ಗಳಿಸಿದರು. ಉಳಿದ ಬ್ಯಾಟ್ಸ್ಮನ್ಗಳು ಹೋರಾಟ ಮಾಡದೆ ಪವೆಲಿಯನ್ ಸೇರಿಕೊಂಡರು.
ಶ್ರೀಲಂಕಾ 212 ರನ್ಗಳಿಗೆ ಆಲೌಟ್ ಆಯಿತು. ಆಪ್ಸ್ಪಿನ್ನರ್ ನಾಥನ್ ಲಯನ್ 5 ವಿಕೆಟ್ ಕಬಳಿಸಿದರೆ, ಸ್ವೆಪ್ಸನ್ 3ವಿಕೆಟ್ ಉರುಳಿಸಿದರು. ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 98 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಡೇವಿಡ್ ವಾರ್ನರ್ 25, ಮಾರ್ನಸ್ ಲಬುಶಂಗೆ 13 ಮತ್ತು ಸ್ಟೀವನ್ ಸ್ಮಿತ್ 6 ರನ್ಗಳಿಸಿ ಔಟಾಗಿದ್ದಾರೆ. ಉಸ್ಮಾನ್ ಖವಾಜ ಅಜೇಯ 47 ಮತ್ತು ಟ್ರಾವಿಸ್ ಹೆಡ್ 6 ರನ್ಗಳಿಸಿ 2ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.