Australia VS Pakistan- ಪಾಕ್ ನೆಲಕ್ಕೆ ಕಾಲಿಟ್ಟ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರು..!

ಕೊನೆಗೂ 24 ವರ್ಷಗಳ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪಾಕಿಸ್ತಾನದ ನೆಲವನ್ನು ಸ್ಪರ್ಶಿಸಿದೆ.
ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಭಯೋತ್ಪಾದನಾ ಚಟುವಟಿಕೆಗಳ ಭಯದಿಂದ ಆಸ್ಟ್ರೇಲಿಯಾ ತಂಡ ಪಾಕ್ ನೆಲಕ್ಕೆ ಕಾಲಿಡಲು ಹೆದರುತ್ತಿತ್ತು. ಆದ್ರೆ ಈಗ ಧೈರ್ಯ ಮಾಡಿಕೊಂಡು ಪಾಕ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ, ಮೂರು ಏಕದಿನ ಪಂದ್ಯಗಳ ಸರಣಿ ಹಾಗೂ ಏಕೈಕ ಟಿ-20 ಪಂದ್ಯವನ್ನು ಆಡಲಿದೆ.
ಪ್ಯಾಟ್ ಕಮಿನ್ಸ್ ಸಾರಥ್ಯದ ಆಸ್ಟ್ರೇಲಿಯಾದ 18 ಮಂದಿ ಆಟಗಾರರು ಇಂದು ಇಸ್ಲಾಮಾಬಾದ್ ಗೆ ತಲುಪಿದ್ದಾರೆ. ಸ್ಟೀವ್ ಸ್ಮಿತ್ ಅವರು ತನ್ನ ಸಾಮಾಜಿಕ ಜಾಲ ತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಇಸ್ಲಾಮಬಾದ್ ಮೂಲದ ಆಸ್ಟ್ರೇಲಿಯಾದ ಉಸ್ಮಾನ್ ಖಾವಾಜ ಅವರು ಕೂಡ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಮೊದಲ ಟೆಸ್ಟ್ ಪಂದ್ಯ ಮಾರ್ಚ್ 4ರಿಂದ 8ರವರೆಗೆ ರಾವಲ್ಪಿಂಡಿಯಲ್ಲಿ ನಡೆದ್ರೆ, ಮಾರ್ಚ್ 12ರಿಂದ 16ರವರೆಗೆ ಕರಾಜಿಯಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಬಳಿಕ ಲಾಹೋರ್ ನಲ್ಲಿ ಮಾರ್ಚ್ 21ರಿಂದ 25ರವರೆಗೆ ನಡೆಯಲಿದೆ. Australia cricket team lands in Pakistan after 24 years for historic series
ಏಕದಿನ ಸರಣಿಯ ಮೊದಲ ಪಂದ್ಯ ಮಾರ್ಚ್ 29, ಮಾರ್ಚ್ 31 ಮತ್ತು ಏಪ್ರಿಲ್ 2ರಂದು ರಾವಲ್ಪಿಂಡಿಯಲ್ಲಿ ನಡೆಯಲಿದೆ. ಏಪ್ರಿಲ್ 5ರಂದು ಏಕೈಕ ಟಿ-20 ಪಂದ್ಯ ರಾವಲ್ಪಿಂಡಿಯಲ್ಲಿ ನಡೆಯಲಿದೆ.
1998ರಲ್ಲಿ ಆಸ್ಟ್ರೇಲಿಯಾ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0ಯಿಂದ ಗೆದ್ದುಕೊಂಡಿತ್ತು. ಹಾಗೇ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0ಯಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.
ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ನಾಯಕನಾಗಿ ಇದು ಮೊದಲ ವಿದೇಶಿ ಪ್ರವಾಸ. ಕೋಚ್ ಜಸ್ಪಿನ್ ಲ್ಯಾಂಜರ್ ಅವರು ರಾಜೀನಾಮೆ ನೀಡಿದ ಕಾರಣ ಆಸ್ಟೇಲಿಯಾ ತಂಡಕ್ಕೆ ಆಂಡ್ರ್ಯೂ ಮೆಕ್ ಡೊನಾಲ್ಡ್ ಹಂಗಾಮಿ ಕೋಚ್ ಆಗಿದ್ದಾರೆ.