ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಟೆಕ್ ಆಸ್ಟ್ರೇಲಿಯಾ ಓಪನ್ ಟನಿಸ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಮೆಲ್ಬೋರ್ನನ ರಾಡ್ ಲಾವೆರ್ ಮೈದಾನದಲ್ಲಿ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ನಾಲ್ಕನೆ ಸುತ್ತಿನಲ್ಲಿ ಇಗಾ ಸ್ವಿಟೆಕ್ ವಿಂಬಲ್ಡನ್ ಚಾಂಪಿಯನ್ ಎಲೆನಾ ರೈಬಾಕಿನಾ ವಿರುದ್ಧ 1 ಗಂಟೆ 30 ನಿಮಿಷಗಳ ಕಾಲ ಹೋರಾಡಿ 4-6, 4-6 ಅಂಕಗಳಿಂದ ಸೋಲು ಕಂಡು ಆಘಾತ ಅನುಭವಿಸಿದರು.
ಈ ಋತುವಿನ ಮೊದಲ ಗ್ರ್ಯಾನ್ ಸ್ಲಾಮ್ ಆಡುತ್ತಿರುವ ಎಲೆನಾ ರೈಬಾಕಿನಾ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಟೂರ್ನಿಯಲ್ಲಿ 22ನೇ ಸೀಡ್ ಆಟಗಾರ್ತಿಯಾಗಿರುವ ರೈಬಾಕಿನಾ ದೊಡ್ಡ ಸರ್ವ್ಗಳ ಮೂಲಕ ಗಲಿಬಿಲಿಗೊಳಿಸಿದರು. ಸ್ವಿಟೆಕ್ ಪಂದ್ಯಕ್ಕೂ ಮುನ್ನ ಪ್ರಾಬಲ್ಯ ಮೆರೆದಿದ್ದಾರೆ. ಪ್ರತಿ ಸೆಟ್ ಅನ್ನು ಗೆಲ್ಲುತ್ತಿದ್ದರು.
ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ 1998ರ ಆಸ್ಟ್ರೇಲಿಯಾನ್ ಓಪನ್ ಚಾಂಪಿಯನ್ ಪೀಟರ್ ಅವರ ಪುತ್ರ ಸೆಬಾಸ್ಟಿಯಾನ್ ಕೊರ್ಡಾ ಎದುರಾಳಿ ಹುರ್ಕಾಜ್ ವಿರುದ್ಧ 3-6, 6-3, 6-2, 1-6,7-6(10-7) ಅಂಕಗಳಿಂದ ಗೆದ್ದರು.
ಮತ್ತೊಂದು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ಟಾನೋಸ್ ಸಿಟ್ಸಿಪಾಸ್ ಸಿನ್ನರ್ ವಿರುದ್ಧ 6-4, 6-4, 3-6, 4-6,6-3 ಅಂಕಗಳಿಂದ ಗೆದ್ದರು.