ವಿಶ್ವದ ನಂ.1 ಆಟಗಾರ್ತಿ ಇಘಾ ಸ್ವಿಯಾಟೆಕ್ ಪ್ರತಿಷ್ಠಿತ ಅಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ 3ನೇ ಸುತ್ತು ಪ್ರವೇಶಿಸಿದ್ದಾರೆ.
ಬುಧವಾರ ರಾಡ್ ಲಾವೆರ್ ಅರೆನಾದಲ್ಲಿ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಎರಡನೆ ಸುತ್ತಿನಲ್ಲಿ 21 ವರ್ಷದ ಇಗಾ ಸ್ವಿಯಾಟೆಕ್ ಒಂದು ಗಂಟೆ 24 ನಿಮಿಷಗಳ ಕಾಲ ಎದುರಾಳಿ ಕಾಮಿಲೊ ಒಸೊರಿಯೊ 6-2, 6-3 ಅಂಕಗಳಿಂದ ಗೆದ್ದುಕೊಂಡರು. 84ನೇ ಶ್ರೇಯಾಂಕಿತ ಆಟಗಾರ್ತಿ ಕಾಮಿಲೊ ವಿರುದ್ಧ ಎರಡೂ ಸೆಟ್ಗಳಲ್ಲೂ ಸಂಪೂರ್ಣ ಪ್ರಾಬಲ್ಯ ಮೆರೆದರು.
ಈ ಗೆಲುವಿನೊಂದಿಗೆ ಸ್ವಿಯಾಟೆಕ್ ಗ್ರ್ಯಾನ್ ಸ್ಲಾಮಗಳಲ್ಲಿ 12ನೇ ಬಾರಿಗೆ ಎರಡನೆ ಸತ್ತು ಗೆದ್ದುಕೊಂಡಿದ್ದಾರೆ.
ಗ್ರ್ಯಾನ್ ಸ್ಲಾಮ್ಗಳಲ್ಲಿ ಸ್ವಿಯಾಟೆಕ್ 65 ಮೇನ್ ಡ್ರಾ ಪಂದ್ಯಗಳ ಪೈಕಿ 53 ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ. ದೊಡ್ಡ ಟೂರ್ನಿಗಳಲ್ಲಿ 6 ಆಟಗಾರ್ತಿಯರು ಮಾತ್ರ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದಿದ್ದಾರೆ.
ಮೂರನೆ ಸುತ್ತಿನಲ್ಲಿ ಯುಎಸ್ ಓಪನ್ ವಿಜೇತೆ ಬಿಂಹಕಾ ಆಂಡ್ರಸ್ ಅಥವಾ ಸ್ಪೇನ್ನ ಕ್ರಿಸ್ಟಿಯಾನಾ ಬುಸ್ಕಾ ಅವರನ್ನು ಎದುರಿಸಲಿದ್ದಾರೆ.