ಭಾರತದ ತಾರಾ ಹೈಜಂಪ್ ಅಥ್ಲೀಟ್ ತೇಜ್ವಸ್ವಿನ್ ಶಂಕರ್ ನ್ಯೂ ಬ್ಯಾಲೆನ್ಸ್ ಇಂಡೋರ್ ಗ್ರ್ಯಾನ್ ಪ್ರಿ ಕೂಟದಲ್ಲಿ ಚಿನ್ನ ಗೆದ್ದಿದ್ದಾರೆ.
24 ವರ್ಷದ ತೇಜ್ವಸ್ವಿನ್ ಶಂಕರ್ 2007ರ ವಿಶ್ವ ಚಾಂಪಿಯನ್ ಹಾಗೂ 2010ರ ಕಾಮನ್ವೆಲ್ತ್ ಚಿನ್ನದ ಪದಕ ವಿಜೇತ ಬಹಾಮಾಸ್ ಡೋನಾಲ್ಡ್ ಥೋಮಸ್ ರನ್ನು ಅವರಿಂದ ಕಠಿಣ ಸವಾಲು ಎದುರಿಸಿ ಹಿಂದಿಕ್ಕಿ ಚಿನ್ನ ಗೆದ್ದರು.
ದೆಹಲಿಯ ಹೈಜಂಪರ್ ತೇಜಸ್ವಿನ್ 2.26 ಮೀಟರ್ ಎತ್ತರಕ್ಕೆ ನೆಗೆದರೆ ಡೋನಾಲ್ಡ್ 2.23 ಮೀ.ಎತ್ತರಕ್ಕೆ ಜಿಗಿದರು.
ತೇಜಸ್ವಿನ್ ತಮ್ಮ 4 ಪ್ರಯತ್ನಗಳಲ್ಲಿ 2.14 ಮೀ. 2.19, 2.23 ಹಾಗೂ 2.26 ಮೀ.ಎತ್ತರಕ್ಕೆ ನೆಗೆದು ಚಿನ್ನದ ಪದಕಕ್ಕೆ ಕೊರೊಳೊಡಿದ್ದರು.
ಸ್ಪರ್ಧೆ ವೇಳೆ ಶಂಕರ್ ಪ್ರೇಕ್ಷಕರಿಂದ ಸಾಕಷ್ಟು ಬೆಂಬಲ ಪಡೆದರು. ಕಳೆದ ವರ್ಷ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚು ಗೆದ್ದಿದ್ದರು. ಶಂಕರ್ 2.29 ಮೀ. ಎತ್ತರಕ್ಕೆ ಜಿಗಿದಿದ್ದು ವೈಯಕ್ತಿಕ ಅತ್ಯುತ್ತಮ ಪ್ರದರ್ಶನವಾಗಿದೆ. 2.28 ಮೀ. ರಾಷ್ಟ್ರೀಯ ದಾಖಲೆಯಾಗಿದೆ.