ಮುಂಬರುವ ಏಷ್ಯಾ ಮಿಕ್ಸಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಗಾಯಾಳು ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಬದಲು ಧ್ರುವ ಕಪಿಲಾ ಅವರನ್ನು ನೇಮಕ ಮಾಡಲಾಗಿದೆ.
ಫೆ.14ರಿಂದ 19ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಪ್ರತಿಷ್ಠಿತ ಟೂರ್ನಿಯ ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್ ಚಿರಾಗ್ ಶೆಟ್ಟಿ ಜೋಡಿಯಾಗಿ ಆಡಬೇಕಿತ್ತು. ಆದರೆ ಸೊಂಟ ನೋವಿನಿಂದ ಬಳಲುತ್ತಿರುವದರಿಂದ ಚಾಂಪಿಯನ್ ಶಿಪ್ನಿಂದ ಹೊರ ನಡೆದಿದ್ದಾರೆ.
ಕಪಿಲಾ ಧ್ರುವಾ ಅವರನ್ನು ನೇಮಕ ಮಾಡಲಾಗಿದೆ.
ಫೆ.16ರಂದು ಬಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಕಾಮನ್ ವೆಲ್ತ್ ಚಾಂಪಿಯನ್ ಮಲೇಷ್ಯಾ ವಿರುದ್ಧ ಆಡುವ ಮೂಲಕ ಟೂರ್ನಿಯನ್ನು ಆರಂಭಿಸಲಿದೆ. ಗುಂಪಿನಲ್ಲಿ ಯುಎಇ ಮತ್ತು ಕಜಕಿಸ್ತಾನ ತಂಡಗಳು ಸ್ಥಾನ ಪಡೆದಿವೆ.
ಪುರುಷರ ಸಿಂಗಲ್ಸ್ ನಲ್ಲಿ ಲಕ್ಷ್ಯಸ ಸೇನ್ ಮತ್ತು ಎಚ್.ಎಸ್.ಪ್ರಣಯ್ ಆಡಲಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು ತಂಡವನ್ನು ಮುನ್ನಡೆಸಲಿದ್ದಾರೆ.
ಮಹಿಳಾ ಡಬಲ್ಸ್ ನಲ್ಲಿ ಕಾಮನ್ ವೆಲ್ತ್ ಕಂಚಿನ ಪದಕ ವಿಜೇತರಾದ
ಗಾಯತ್ರಿ ಗೋಪಿಚಂದ್ ಮತ್ತು ಟ್ರೆಸ್ಸಾ ಜಾಲಿ ತಂಡವನ್ನು ಮುನ್ನಡೆಸಲಿದ್ದಾರೆ.
ಮಿಶ್ರ ಡಬಲ್ಸ್ ನಲ್ಲಿ ತನಿಶಾ ಮತ್ತು ಇಶಾನ್ ತಂಡವನ್ನು ಮು್ನನಡೆಸಲಿದ್ದಾರೆ. 17 ತಂಡಗಳು ಸೇರಿದಂತೆ ಹಾಲಿ ಚಾಂಪಿಯನ್ ಚೀನಾ ಚಾಂಪಿಯನ್ ಶಿಪ್ನಲ್ಲಿ ಸೆಣಸಲಿವೆ.