Asia Cup ವಿಜೇತ ಶ್ರೀಲಂಕಾ ತಂಡಕ್ಕೆ ತವರಿನಲ್ಲಿ ಭವ್ಯ ಸ್ವಾಗತ
ಆರ್ಥಿಕ ಬಿಕ್ಕಟ್ಟಿನ ನಡುವೆಯೂ, ಶ್ರೀಲಂಕಾ ಏಷ್ಯಾ ಕಪ್ ವಿಜೇತ ಕ್ರಿಕೆಟ್ ಮತ್ತು ನೆಟ್‌ಬಾಲ್ ತಂಡಗಳಿಗೆ ತವರಿನಲ್ಲಿ ಭವ್ಯವಾದ ಸ್ವಾಗತವನ್ನು ನೀಡಿತು. ಮಂಗಳವಾರ ಅವರನ್ನು ವಿಮಾನ ನಿಲ್ದಾಣದಿಂದ ರಾಜಧಾನಿ ಕೊಲಂಬೊದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

ಮಂಗಳವಾರ ಬೆಳಿಗ್ಗೆಯಿಂದಲೇ ಕ್ಯಾಪ್ಟನ್ ದಸುನ್ ಶನಕ ಮತ್ತು ಅವರ ತಂಡವನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಲಾರಂಭಿಸಿದರು. ಭಾನುವಾರ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಾಕಿಸ್ತಾನವನ್ನು 23 ರನ್‌ಗಳಿಂದ ಸೋಲಿಸುವ ಮೂಲಕ ಶನಕ ಮತ್ತು ಅವರ ತಂಡವು ಆರನೇ ಬಾರಿಗೆ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ತಂಡದ ಬೆಂಗಾವಲು ಪಡೆ ಸುತ್ತಲೂ ಬಿಗಿ ಭದ್ರತೆಯಲ್ಲಿ ಹೊರಬಂದು ಅಭಿಮಾನಿಗಳ ಶುಭಾಶಯಗಳನ್ನು ಸ್ವೀಕರಿಸಿತು.

ಫೈನಲ್‌ನಲ್ಲಿ ಅಜೇಯ 71 ರನ್ ಗಳಿಸಿ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಪಡೆದ ಭಾನುಕಾ ರಾಜಪಕ್ಸೆ, ಬಂಡಾರನಾಯಕೆ ವಿಮಾನ ನಿಲ್ದಾಣದಿಂದ ಹೊರಡುವಾಗ ಇದು ಇಡೀ ದೇಶಕ್ಕೆ ಸಂದ ಜಯ ಎಂದರು. ನಾವು ಮಾಡಿರುವ ಕೆಲಸಗಳಿಂದ ನಮ್ಮ ದೇಶದ ಜನರ ಮುಖದಲ್ಲಿ ಸ್ವಲ್ಪ ನಗು ತರಬಹುದು. ಇದು ನಮಗೆ ದೊಡ್ಡ ಗೆಲುವು. ದೇಶದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಭಾನುಕ, ಒಂದು ದೇಶವಾಗಿ, ಜಗತ್ತು ಈಗ ನಮ್ಮನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಿದೆ” ಎಂದಿದ್ದಾರೆ.

ಏಷ್ಯಾಕಪ್ 2022 ರಲ್ಲಿ ತನ್ನ ಪ್ರದರ್ಶನದ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದ ಶ್ರೀಲಂಕಾ ತಂಡ ಇದೀಗ ಪ್ರಶಸ್ತಿ ಗೆದ್ದು ತನ್ನ ದೇಶವನ್ನು ತಲುಪಿದೆ. ಮಂಗಳವಾರ, ಕೊಲಂಬೊದ ಬೀದಿಗಳಲ್ಲಿ, ದಸುನ್ ಶನಕಾ (ಶ್ರೀಲಂಕಾ ಕ್ರಿಕೆಟ್ ತಂಡ) ನಾಯಕತ್ವದ ತಂಡವು ತೆರೆದ ಬಸ್‌ನಲ್ಲಿ ಕೊಲಂಬೊದ ಬೀದಿಗಳಲ್ಲಿ ಕಂಡುಬಂದಿತು.
Asia Cup, Sri Lanka, cricket, team, sports karnataka